ಕೆಜಿಗೆ 1ರಿಂದ 5ರೂ.ಗೆ ಕುಸಿದ ಈರುಳ್ಳಿ ಬೆಲೆ : ಕಂಗಾಲಾದ ರೈತ

ಈ ಸುದ್ದಿಯನ್ನು ಶೇರ್ ಮಾಡಿ

Onion

ಬೆಂಗಳೂರು, ಅ.26- ಈರುಳ್ಳಿ ಬೆಳೆದ ರೈತರು ಕಂಗಾಲಾಗಿದ್ದಾರೆ. ಜೀವನ ಹೇಗೆ ನಡೆಸುವುದು ಎಂಬ ಚಿಂತೆಯಲ್ಲಿ ಮುಳುಗಿದ್ದಾರೆ. ಇದಕ್ಕೆ ಕಾರಣ ಈರುಳ್ಳಿ ಬೆಲೆ ಕುಸಿತ. ಈರುಳ್ಳಿ ದರ ಎರಡು ದಶಕಗಳ ಹಿಂದೆ ಇದ್ದ ಕನಿಷ್ಟ ಮಟ್ಟಕ್ಕೆ ಕುಸಿದಿದೆ. ರಾಜ್ಯದ ಎಪಿಎಂಸಿ ಯಾರ್ಡ್‍ಗಳಲ್ಲಿ ಒಂದು ಕೆಜಿ ಈರುಳ್ಳಿ ದರ 1ರಿಂದ 5ರೂ.ಗೆ ಸೀಮಿತವಾಗಿದೆ. ಕಳೆದ ವರ್ಷ ಈ ಹೊತ್ತಿಗೆ ಕ್ವಿಂಟಾಲ್ ಈರುಳ್ಳಿಗೆ 3 ರಿಂದ 5 ಸಾವಿರ ರೂ. ಇತ್ತು. ಆದರೆ, ಈ ವರ್ಷ 250 ರಿಂದ 300 ರೂ.ಗೆ ಕುಸಿತ ಕಂಡಿದೆ. ಆದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ಮಾತ್ರ ಈರುಳ್ಳಿ 15 ರೂ.ಗಿಂತ ಕಡಿಮೆಗೆ ಸಿಗುತ್ತಿಲ್ಲ. ಬೆಳೆದ ರೈತನಿಗೆ ಕೆ.ಜಿಗೆ 3-4 ರೂ., ಖರೀದಿಸುವವರಿಗೆ ಕೆ.ಜಿಗೆ 15 ರೂ. ಇದರ ನಡುವಿನ ಭಾರಿ ವ್ಯತ್ಯಾಸದ ಹಣ ಎಲ್ಲಿಗೆ ಹೋಗುತ್ತಿದೆ ಎನ್ನುವುದು ಕೃಷಿ ಉತ್ಪನ್ನಗಳ ಮಾರುಕಟ್ಟೆ ವ್ಯವಸ್ಥೆಯಲ್ಲಿರುವ ದೋಷಗಳಿಗೆ ಸಾಕ್ಷಿಯಾಗಿದೆ.

ಈರುಳ್ಳಿ ಕುಸಿತಕ್ಕೆ ಕಾರಣಗಳೇನು ?

ಈರುಳ್ಳಿ ಕುಸಿತಕ್ಕೆ ಅನೇಕ ಕಾರಣಗಳಿವೆ. ಈ ಬಾರಿ ಯಥೇಚ್ಚ ಪ್ರಮಾಣದಲ್ಲಿ ರೈತರು ಈರುಳ್ಳಿ ಬೆಳೆ ಬೆಳೆದಿದ್ದಾರೆ. ದಸರಾ ಹಬ್ಬದ ಸತತ ರಜೆಗಳ ನಂತರ ಒಂದೇ ಬಾರಿಗೆ ಎಲ್ಲ ರೈತರು ಈರುಳ್ಳಿ ಕಟಾವು ಮಾಡಿ ಮಾರುಕಟ್ಟೆಗೆ ಸಾಗಣೆ ಮಾಡಿದ್ದಾರೆ. ಮಹಾರಾಷ್ಟ್ರ, ರಾಜಸ್ಥಾನಗಳಿಂದ ಬಂದಿರುವ ಈರುಳ್ಳಿ ದಾಸ್ತಾನು ಇನ್ನು ಖಾಲಿಯಾಗಿಲ್ಲ. ಮಹಾರಾಷ್ಟ್ರದ ಈರುಳ್ಳಿಯ ಮುಂದೆ ನಮ್ಮ ರಾಜ್ಯದ ಈರುಳ್ಳಿಯ ಶೆಲ್ಫ್ ಲೈಫ್ ಕಡಿಮೆಯಿದೆ. ಕಾವೇರಿ ನದಿ ನೀರು ವಿವಾದದಿಂದ ತಮಿಳುನಾಡು ವ್ಯಾಪಾರಿಗಳು ಈರುಳ್ಳಿ ಖರೀದಿಗೆ ಮುಂದಾಗುತ್ತಿಲ್ಲ. ರಾಜ್ಯದಲ್ಲಿ ಈರುಳ್ಳಿಗೆ ಸರಿಯಾದ ರಫ್ತು ವ್ಯವಸ್ಥೆ ಇಲ್ಲ. ಎಪಿಎಂಸಿಗಳಲ್ಲಿ ಗೋದಾಮುಗಳಿಲ್ಲ. ಈ ಎಲ್ಲಾ ಕಾರಣಗಳಿಂದ ಬೆಲೆ ಕುಸಿತಗೊಂಡಿದ್ದು, ರೈತರು ಕಂಗಲಾಗಿದ್ದಾರೆ.

ಬೆಲೆ ಕುಸಿತದಿಂದ ಕಂಗಾಲಾಗಿರುವ ಬೆಳೆಗಾರರು ಈರುಳ್ಳಿಯನ್ನು ರಸ್ತೆಗೆ ಸುರಿದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನಾದರೂ ಸರ್ಕಾರ ರೈತರಿಗೆ ಬೆಂಬಲ ಬೆಲ ದೊರಕಿಸಿಕೊಡಬೇಕಾಗಿದೆ.
ಎಪಿಎಂಸಿಗಳಲ್ಲಿ ಈರುಳ್ಳಿ ದರ
ಬೆಂಗಳೂರು – 1 ರಿಂದ 5ರೂ.
ಹುಬ್ಬಳ್ಳಿ – 2 ರಿಂದ 5ರೂ.
ದಾವಣಗೆರೆ – 2 ರಿಂದ 5ರೂ.
ಚಿತ್ರದುರ್ಗ – 2 ರಿಂದ 3ರೂ.
ಹಾವೇರಿ – 1 ರಿಂದ 5ರೂ.
ಮೈಸೂರು – 1 ರಿಂದ 5ರೂ.
ಧಾರವಾಡ – 2 ರಿಂದ 3ರೂ.
ಚಿಲ್ಲರೆ ಮಾರುಕಟ್ಟೆ ಬೆಲೆ (ಕೆ.ಜಿಗೆ)
ಸಣ್ಣ ಈರುಳ್ಳಿ – 5 ರಿಂದ 8 ರೂ.
ಮಧ್ಯಮ ಗಾತ್ರ ಈರುಳ್ಳಿ – 15 ರೂ.
ದೊಡ್ಡ ಈರುಳ್ಳಿ – 20 ರೂ.
ಗ್ರಾಹಕರಿಗೆ ಈರುಳ್ಳಿ ಸಿಗುತ್ತಿರುವ ದರ :
ಹಾಪ್ ಕಾಮ್ಸ್ ದರ – 18 ರೂ.
ಬಿಗ್ ಬಜಾರ್ – 19 ರೂ.
ಮೋರ್ – 16 ರೂ.

► Follow us on –  Facebook / Twitter  / Google+

Facebook Comments

Sri Raghav

Admin