ಕೆಟ್ಟ ಭಯೋತ್ಪಾದಕರು, ಒಳ್ಳೆಯ ಭಯೋತ್ಪಾದಕರಲ್ಲ, ಭಯೋತ್ಪಾದಕರು ಭಯೋತ್ಪಾದಕರೇ

ಈ ಸುದ್ದಿಯನ್ನು ಶೇರ್ ಮಾಡಿ

agfAGADGಇಸ್ಲಾಮಾಬಾದ್: ‘ಇಲ್ಲಿ ಕೆಟ್ಟ ಭಯೋತ್ಪಾದಕರು ಅಥವಾ ಒಳ್ಳೆಯ ಭಯೋತ್ಪಾದಕರು ಇರಲ್ಲ, ಭಯೋತ್ಪಾದಕರು ಅಂದರೇ ಭಯೋತ್ಪಾದಕರು, ಭಯೋತ್ಪಾದಕರನ್ನು ದಮನ ಮಾಡಬೇಕು’ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಗದಾಪ್ರಹಾರ ನಡೆಸಿದರು. ಇಸ್ಲಾಮಾಬಾದ್‍ನ ಪಾಷ್ ಸರೀನಾ ಹೋಟೆಲ್‍ನಲ್ಲಿ ನಡೆದ ಸಾಕ್ ಸಮ್ಮೇಳನದಲ್ಲಿ ಭಾಷಣ ಮಾಡಿದ ರಾಜನಾಥ್,  ಭಯೋತ್ಪಾದಕರಿಗೆ ಕಠಿಣ ಸಂದೇಶ ರವಾನಿಸಿದರು. ಆದರೆ ರಾಜನಾಥ್ ಸಿಂಗ್ ಮಾಡಿದ ಭಾಷಣವನ್ನು ಪಾಕ್ ಬ್ಲ್ಯಾಕ್ ಮಾಡಿತ್ತು, ಅಲ್ಲದೆ, ಭಾರತ ಮಾಧ್ಯಮ ಸೇರಿದಂತೆ ಸ್ಥಳೀಯ ಮಾಧ್ಯಮಗಳು ಈ ಕುರಿತು ಪ್ರಸಾರ ಮಾಡದಂತೆ ನಿರ್ಭಂಧ ಹೇರಲಾಗಿತ್ತು.
ಕಳೆದ ತಿಂಗಳ ಹಿಂದೆ ಕಾಶ್ಮೀರದಲ್ಲಿ ಭದ್ರತಾ ಪಡೆ ಗಳು ನಡೆಸಿದ ಎನ್‍ಕೌಟಂರ್ ನಲ್ಲಿ ಮುಜಾಹೀದೀನ್ ಸಂಘಟನೆ ಮುಖಂಡ ಬುರ್ಹಾನ್ ವಾನಿಯನ್ನು ಹತ್ಯೆ ಮಾಡಿತ್ತು. ಆದರೆ ಆತನ ಬೆಂಬಲಿಗರು ಸೇರದಿಂತೆ ಪತ್ಯೇಕಾತವಾದಿಗಳು ವಾನಿಯನ್ನು ಹುತಾತ್ಮ ಎಂದು ಬಿಂಬಿಸಲಾಯಿತು. ಹೀಗಾಗಿ ಉಗ್ರರನ್ನು ಹುತಾತ್ಮ ಎಂದು ಕರೆಯಬೇಡಿ ಎಂದು ಸಿಂಗ್ ತಿಳಿಸಿದರು.

► Follow us on –  Facebook / Twitter  / Google+

ಡೌನ್ಲೋಡ್ ‘ಈ ಸಂಜೆ’ ಮೊಬೈಲ್  ಆಪ್ 

Facebook Comments

Sri Raghav

Admin