ಕೆನರಾ ಬ್ಯಾಂಕ್ ಸಾಲ ಸುಸ್ತಿದಾರರಿಗೆ ಒಳ್ಳೆಯ ಅವಕಾಶ

ಈ ಸುದ್ದಿಯನ್ನು ಶೇರ್ ಮಾಡಿ

canara--bank

ಬೆಂಗಳೂರು, ಅ.27- ಕೆನರಾ ಬ್ಯಾಂಕ್‍ನಿಂದ ಸಾಲ ಪಡೆದು ಸುಸ್ತಿದಾರರಾಗಿರುವವರು ಯಾವುದೇ ಮೊಕದ್ದಮೆಯಿಲ್ಲದೆ ಸಮಸ್ಯೆಯಿಂದ ಹೊರ ಬರಲು ಇದೊಂದು ಒಳ್ಳೆಯ ಅವಕಾಶ.ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ 20 ಲಕ್ಷಕ್ಕೂ ಹೆಚ್ಚು ಸಾಲ ಪಡೆದು ಪಾವತಿ ಮಾಡದವರು ಸಿಟಿ ಸಿವಿಲ್ ಕೋರ್ಟ್‍ನಲ್ಲಿ ಇಂದು ಮತ್ತು ನಾಳೆ ನಡೆಯುವ ಲೋಕ್ ಅದಾಲತ್‍ನಲ್ಲಿ ಭಾಗವಹಿಸಿ ಸಾಲದ ಮೊತ್ತದ ಶೇ.25ರಷ್ಟು ಪಾವತಿಸಿ ಬಡ್ಡಿಯಲ್ಲಿ ಕಡಿತದ ಲಾಭ ಪಡೆಯಬಹುದಾಗಿದೆ.ಇದರಿಂದ ನ್ಯಾಯಾಲಯದಲ್ಲಿ ಮೊಕದ್ದಮೆ, ಆಸ್ತಿ ಜಪ್ತಿಯಂತಹ ಕ್ರಮಗಳಿಂದ ಪಾರಾಬಹುದಾಗಿದೆ. ಸಂಪೂರ್ಣ ಪಾವತಿಗೆ 2-3 ತಿಂಗಳು ಅವಕಾಶ ನೀಡಲಿದ್ದು, ನೋಟಿಸ್ ತಲುಪದ, ಪ್ರಕರಣ ದಾಖಲಾಗಿದ ಸುಸ್ತಿದಾರರು ಖಾತೆ ಸಂಖ್ಯೆಯೊಂದಿಗೆ ಲೋಕ ಅದಾಲತ್‍ನಲ್ಲಿ ಭಾಗವಹಿಸಬಹುದು ಎಂದು ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಎಂ.ಎಂ.ಚಿನಿವಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಜಿ.ಉಮಾ ಮಾತನಾಡಿ, ಕೆನರಾ ಬ್ಯಾಂಕ್ ವತಿಯಿಂದ ನಗರದಲ್ಲಿ ಇದೇ ಮೊದಲ ಬಾರಿಗೆ ಇಂತಹ ಅವಕಾಶಗಳನ್ನು ಕಲ್ಪಿಸಲಾಗಿದ್ದು, ಪ್ರಾಧಿಕಾರದಿಂದ ಸಂಪೂರ್ಣ ಉಚಿತವಾಗಿ ಪ್ರಕರಣ ಇತ್ಯರ್ಥಗೊಳಿಸಲಾಗುತ್ತಿದೆ. ನ್ಯಾಯಕ್ಕಾಗಿ ಎಲ್ಲರಿಗೂ ಅವಕಾಶ ಕಲ್ಪಿಸುವ ಸಂವಿಧಾನದ ಆಶಯದಂತೆ ಈ ಕಾರ್ಯಕ್ಕೆ ಬೆಂಬಲಿಸುತ್ತಿದ್ದೇವೆ ಎಂದರು.ಕೈಗಾರಿಕೆ, ಗೃಹ ಹಾಗೂ ವಾಹನ ಸೇರಿದಂತೆ ಯಾವುದೇ ರೀತಿಯ ಸಾಲ ಪಡೆದವರು ಈ ಲೋಕ ಅದಾಲತ್‍ನಲ್ಲಿ ಭಾಗವಹಿಸಬಹುದು. ಸಮಸ್ಯೆ ನಿವಾರಿಸಲು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸಹಾಯ ಪಡೆದು ಅದಾಲತ್ ಆಯೋಜಿಸಲಾಗಿದ್ದು, ಕೃಷಿ ಸಾಲ ಪಡೆದವರಿಗೆ ನೋಟಿಸ್ ನೀಡಲಾಗಿಲ್ಲ. ಹೆಚ್ಚಿನ ಮಾಹಿತಿಗೆ ದೂ.ಸಂ.9448087285 ಸಂಪರ್ಕಿಸಲು ಚಿನಿವಾರ್ ತಿಳಿಸಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin