ಕೆಪಿಎಸ್ಸಿ ಶ್ಯಾಂಭಟ್ ಅಧಿಕಾರ ಸ್ವೀಕಾರ

ಈ ಸುದ್ದಿಯನ್ನು ಶೇರ್ ಮಾಡಿ

shyam

ಬೆಂಗಳೂರು, ಆ.10-ಕರ್ನಾಟಕ ಲೋಕಸೇವಾ ಆಯೋಗಕ್ಕೆ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆ ಯಾಗಿರುವ ಹಿರಿಯ ಐಎಎಸ್ ಅಧಿಕಾರಿ ಶ್ಯಾಂ ಭಟ್ ಇಂದು ಅಧಿಕಾರ ಸ್ವೀಕರಿಸಿದರು.
ಕಚೇರಿ ಮುಖ್ಯದ್ವಾರದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ನೇಮಕ ಕಾನೂನು ಪ್ರಕಾರವಾಗಿ ನಡೆದಿದೆ ಎಂದು ಸಮರ್ಥಿಸಿಕೊಂಡರು.  ರಾಜ್ಯ ಸರ್ಕಾರ ನನ್ನ ಹೆಸರನ್ನು ಶಿಫಾರಸ್ಸು ಮಾಡಿತ್ತು. ರಾಜ್ಯಪಾಲರು ಎಲ್ಲ ರೀತಿಯ ಪರಿಶೀಲನೆ ನಡೆಸಿ ನಂತರ ನೇಮಕ ಮಾಡಿ ಆದೇಶ ಹೊರಡಿಸಿ ದ್ದಾರೆ. ಇದಕ್ಕೆ ನನ್ನ ಧನ್ಯವಾದಗಳು ಎಂದರು.  ಮುಂದಿನ ದಿನಗಳಲ್ಲಿ ಕೆಪಿಎಸ್‍ಸಿಯಲ್ಲಿ ನಿಯಮಾನುಸಾರ ಚಟುವಟಿಕೆಗಳು ನಡೆಯುವಂತೆ ಕ್ರಮ ಕೈಗೊಳ್ಳುತ್ತೇನೆ.

ಹಿಂದಿನಿಂದಲೂ ಮಾಧ್ಯಮ ಗಳಿಗೆ ಕೆಪಿಎಸ್‍ಸಿ ಕಚೇರಿಯೊಳಗೆ ಪ್ರವೇಶವನ್ನು ನಿರ್ಬಂಧಿಸಲಾಗಿದ್ದು, ನಾನೂ ಸಹ ಅದನ್ನು ಪಾಲಿಸುವುದಾಗಿ ತಿಳಿಸಿದ ಶ್ಯಾಂಭಟ್, ಮಾಧ್ಯಮಗಳ ಮತ್ತು ಜನರ ಸಹಕಾರ ಕೋರಿದರು.

Facebook Comments

Sri Raghav

Admin