ಕೆಪಿಎಸ್‌ಸಿಯಲ್ಲಿ ಎಫ್‌ಡಿಎ-ಎಸ್‌ಡಿಎ ಹುದ್ದೆಗಳ ನೇಮಕಾತಿ : ಇಲ್ಲಿದೆ ನೋಡಿ ಸಂಪೂರ್ಣ ವಿವರ

ಈ ಸುದ್ದಿಯನ್ನು ಶೇರ್ ಮಾಡಿ

KPSC--01

ಕರ್ನಾಟಕ ಲೋಕಸೇವಾ ಆಯೋಗವು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಪ್ರಥಮ ಮತ್ತು ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಅಹ್ವಾನಿಸಲಾಗಿದೆ.
ಹುದ್ದೆಗಳ ಸಂಖ್ಯೆ : 754
ಹುದ್ದೆಗಳ ವಿವರ :
ಪ್ರಥಮ ದರ್ಜೆ ಸಹಾಯಕರ ಹುದ್ದೆಗಳ : 454 (ಹೈ.ಕ – 56)
ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳ : 300 (ಹೈ.ಕ – 38)

ಶುಲ್ಕ : ಸಾಮಾನ್ಯ ವರ್ಗದವರಿಗೆ 300 ರೂ, ಪ್ರವರ್ಗ 2(ಎ), 2(ಬಿ), 3(ಎ) ವರ್ಗದವರಿಗೆ 150 ರೂ.ಗಳು. ಹಾಗೂ ಪ.ಜಾ, ಪಪಂ, ಪ್ರವರ್ಗ 1 ಮತ್ತು ಅಂಗವಿಕಲ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ. ಶುಲ್ಕವನ್ನು ಸ್ಥಳೀಯ ಎಲೆಕ್ಟ್ರಾನಿಕ್ ಅಂಚೆ ಕಚೇರಿಗಳ ಮೂಲಕ  ಪಾವತಿಸಲು ಮಾತ್ರ ಅವಕಾಶವಿದೆ.

ಅರ್ಹತೆ : ಒಂದಕ್ಕಿಂತ ಹೆಚ್ಚು ಜೀವಂತ ಪತ್ನಿ ಹೊಂದಿರುವ ಪುರುಷ, ಈಗಾಗಲೇ ಮತ್ತೊಬ್ಬ ಹೆಂಡತಿ ಇರುವ ಪುರುಷನನ್ನು ಮದುವೆಯಾಗಿರುವ ಮಹಿಳಾ ಅಭ್ಯರ್ಥಿಯು ಸರ್ಕಾರದಿಂದ ಪೂರ್ವಾನುಮತಿ ಇಲ್ಲದೇ ನೇಮಕಾತಿಗೆ ಅರ್ಹರಾಗಿರುವುದಿಲ್ಲ.

ವಿದ್ಯಾರ್ಹತೆ ; ಪ್ರಥಮ ದರ್ಜೆ ಸಹಾಯಕರ ಹುದ್ದೆಗಳಿಗೆ ಪದವಿ ಅಥವಾ ಇದಕ್ಕೆ ಸಮನಾದ ಶಿಕ್ಷಣ ಪಡೆದಿರಬೇಕು. ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳಿಗೆ ಪದವಿ ಪೂರ್ವ ಶಿಕ್ಷಣ (ಪಿಯುಸಿ) ಅಥವಾ ಇದಕ್ಕೆ ಸಮನಾದ ವಿದ್ಯಾರ್ಹತೆಯಾದ ಐಟಿಐ ಹಾಗೂ ಮೂರು ವರ್ಷದ ಡಿಪ್ಲೊಮಾ ಕೋರ್ಸ್ ಪಡೆದವರು ಅರ್ಹರಾಗಿರುತ್ತಾರೆ.

ವಯೋಮಿತಿ : ಕನಿಷ್ಠ 18 ವರ್ಷ ನಿಗದಿಯಾಗಿದ್ದು, ಗರಿಷ್ಠ ವಯೋಮಿತಿಯಲ್ಲಿ ಸಾಮಾನ್ಯ ವರ್ಗದವರಿಗೆ 35 ವರ್ಷ, 2ಎ,2ಬಿ,3ಎ,3ಬಿ ವರ್ಗದವರಿಗೆ 38 ವರ್ಷ ಹಾಗೂ ಪ.ಜಾ, ಪಪಂ, ಪ್ರವರ್ಗ-1ಕ್ಕೆ 40 ವರ್ಷ ನಿಗದಿಮಾಡಲಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ  : 12-12-2017
ಶುಲ್ಕ ಪಾವತಿಸಲು ಕೊನೆಯ ದಿನಾಂಕ  : 13-12-2017
ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್ ಸೈಟ್ ವಿಳಾಸ  www.kpsc.kar.nic.in   ಗೆ ಭೇಟಿ ನೀಡಿ.

ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ಕಿಸಿ  

ಹಿಂದಿನ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ಕಿಸಿ 

Facebook Comments

Sri Raghav

Admin