ಕೆಪಿಎಸ್‍ಸಿ ನೇಮಕಾತಿ ಪ್ರಕ್ರಿಯೆ ತ್ವರಿತಗೊಳಿಸಲು ಒತ್ತಾಯ

ಈ ಸುದ್ದಿಯನ್ನು ಶೇರ್ ಮಾಡಿ

kpsc

ಬೆಂಗಳೂರು,ಅ.17- ಕರ್ನಾಟಕ ಲೋಕಸೇವಾ ಆಯೋಗ ಈಗಾಗಲೇ ಪರೀಕ್ಷೆ ನಡೆಸಿ ದಾಖಲಾತಿ ಪರಿಶೀಲನೆ ನಡೆಸಿರುವ ಕೆಎಎಸ್ ನೇಮಕಾತಿ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಶಾಸಕ ನಾರಾಯಣಸ್ವಾಮಿ ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎರಡು ವರ್ಷಗಳ ಹಿಂದೆ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಿದ್ದು ಅಭ್ಯರ್ಥಿಗಳ ದಾಖಲೆ ಪರಿಶೀಲನೆ ನಡೆಸಿ ಆರು ತಿಂಗಳು ಕಳೆದರೂ ಸಂದರ್ಶನ ನಡೆಸಿಲ್ಲ. ಈ ನಡುವೆ ರಾಜ್ಯ ಸರ್ಕಾರ ಸಂದರ್ಶನದ ಪ್ರಮಾಣವನ್ನು 1:3 ರಿಂದ 1:5ಕ್ಕೆ ಏರಿಕೆ ಮಾಡಿದೆ. ಈ ಪ್ರಮಾಣದಲ್ಲಿ ಸಂದರ್ಶನ ನಡೆಸಿದರೆ ಅರ್ಹರಿಗೆ ಅನ್ಯಾಯವಾಗುತ್ತದೆ.

ಖೋಟಾ ಸಮಿತಿ ಶಿಫಾರಸ್ಸಿನಂತೆ ಒಂದು ಹುದ್ದೆಗೆ ಮೂರು ಅಭ್ಯರ್ಥಿಗಳ ಪ್ರಮಾಣದಲ್ಲಿ ಸಂದರ್ಶನ ಪೂರ್ಣಗೊಳಿಸಬೇಕು. ನೇಮಕಾತಿ ವಿಳಂಬವಾಗುತ್ತಿರುವುದರಿಂದ ಅಭ್ಯರ್ಥಿಗಳು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ ಒಂದು ವೇಳೆ ಸಂದರ್ಶನ ಪ್ರಮಾಣ ಬದಲಾವಣೆ ಮಾಡುವುದಾದರೆ ಸಂಬಂಧಪಟ್ಟವರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

► Follow us on –  Facebook / Twitter  / Google+

Facebook Comments

Sri Raghav

Admin