ಕೆಪಿಜೆಪಿ ಪಕ್ಷದ ಅಧಿಕೃತ ವೆಬ್ಸೈಟ್, ಅಪ್ ಬಿಡುಗಡೆ ಮಾಡಿದ ಉಪ್ಪಿ

ಈ ಸುದ್ದಿಯನ್ನು ಶೇರ್ ಮಾಡಿ

Uppi--02

ಬೆಂಗಳೂರು. ನ. 12 : ಇತ್ತೀಚೆಗಷ್ಟೇ ಪಕ್ಷ ಕಟ್ಟಿ ರಾಜಕೀಯವನ್ನೇ ಪ್ರಜಾಕೀಯವನ್ನಾಗಿ ಬದಲಿಸಲು ಹೊರಟಿರುವ ನಟ ರಿಯಲ್ ಸ್ಟಾರ್ ಉಪೇಂದ್ರ  ನಿನ್ನೆ  ತಮ್ಮ ಅಧಿಕೃತ ವೆಬ್ಸೈಟ್, ಅಪ್ ಲೋಕಾರ್ಪಣೆ ಮಾಡಿದರು. ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ ( ಕೆಪಿಜೆಪಿ) ಪಕ್ಷ ಹಾಗೂ ಉಪೇಂದ್ರ ಅವರ ರಾಜಕೀಯ ಕಾರ್ಯಕ್ರಮಗಳ ಮಾಹಿತಿಯನ್ನು www.kpjpuppi.org ವೆಬ್ ಸೈಟ್ ನಲ್ಲಿ ಪಡೆಯಬಹುದಾಗಿದ್ದು ವೆಬ್ಸೈಟ್ ಮೂಲಕ ನಿಮ್ಮ ಸಲಹೆಗಳು, ಅನಿಸಿಕೆಗಳನ್ನು ಶೇರ್ ಮಾಡಿಕೊಳ್ಳಬಹುದು.

ಈ ವೆಬ್ ಸೈಟ್ ನಲ್ಲಿ ಪಕ್ಷದ ಗುರಿ, ಕಾರ್ಯಚಟುವಟಿಕೆಗಳು ಹೇಗಿದೆ? ಜನರನ್ನು ತಲುಪುವ ಬಗೆ ಹೇಗೆ ಎನ್ನುವ ನಾನಾ ವಿವರಗಳು ಇಲ್ಲಿ ಲಭ್ಯವಿದೆ. “ಯಾರಾದರೂ ಪಕ್ಷದ ಅಭ್ಯರ್ಥಿಯಾಗಬಯಸಿದರೆ ಅಂತಹವರು ತಮ್ಮ ವಿವರಗಳನ್ನು ವೆಬ್ ಸೈಟ್ ನಲ್ಲಿ ಅಪ್ ಮಾಡಬೇಕಾಗುತ್ತದೆ. ವಿಧಾನಸಭಾ ಕ್ಷೇತ್ರಕ್ಕೆ ಏನೇನು ಬೇಕೆಂಬ ಬಗ್ಗೆ ಮಾಹಿತಿಯನ್ನು ಜನರಿಗೆ ಈ ವೆಬ್ ಸೈಟ್ ನಲ್ಲಿ ತಿಳಿಸಲಾಗುತ್ತದೆ” ಎಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಉಪೇಂದ್ರ ವಿವರಿಸಿದ್ದಾರೆ.

ಪಕ್ಷಕ್ಕೆ ಸೇರಬಯಸುವವರಿಗೆ ಯಾವುದೇ ವಿದ್ಯಾರ್ಹತೆಯ ಅಗತ್ಯವಿಲ್ಲ. ಗ್ರಾಮ ಪಂಚಾಯತ್, ನಗರ ಸಭೆ, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್, ಶಾಸಕ ಅಭ್ಯರ್ಥಿಗಳು ಸಹ ನಮ್ಮ ವೆಬ್‍ ಸೈಟ್ ಗೆ ವಿವರಗಳನ್ನು ಕಳಿಸಬಹುದು. ಮುಂದಿನ ಚುನಾವಣೆಯಲ್ಲಿ ಉಪೇಂದ್ರ ನೇತೃತ್ವದ ಪಕ್ಷ 224 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆಯಂತೆ.

Facebook Comments

Sri Raghav

Admin