ಕೆಪಿಸಿಸಿ ಅಧ್ಯಕ್ಷರಾಗಿ ಪರಮೇಶ್ವರ್ ಅವರನ್ನೇ ಮುಂದುವರೆಸುವಂತೆ ದಲಿತ ಮುಖಂಡರ ಆಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

KPCC-01

ಬೆಂಗಳೂರು, ಮೇ 28-ಹಾಲಿ ಕೆಪಿಸಿಸಿ ಅಧ್ಯಕ್ಷರಾಗಿರುವ ಪರಮೇಶ್ವರ್ ಅವರನ್ನೇ ಮುಂದುವರೆಸಬೇಕೆಂದು ರಾಜ್ಯ ದಲಿತ ಮುಖಂಡರು ಆಗ್ರಹಿಸಿದ್ದಾರೆ. ಈ ಸಂಬಂಧ ಪಕ್ಷದ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಅವರಿಗೆ ಮನವಿಯನ್ನು ಸಲ್ಲಿಸಿದ್ದಾರೆ.   ರಾಜ್ಯದಲ್ಲಿ ದಲಿತರು ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ನಿರಂತರವಾಗಿ ಬೆಂಬಲಿಸುತ್ತಾ ಬಂದಿದ್ದಾರೆ. ಚುನಾವಣಾ ಹೊಸ್ತಿಲಿನಲ್ಲಿ ಹಾಲಿ ಅಧ್ಯಕ್ಷರಾಗಿರುವ ಪರಮೇಶ್ವರ್ ಅವರನ್ನು ಬದಲಿಸುವ ನಿರ್ಣಯವೇನಾದರೂ ಕೈಗೊಂಡರೆ ಕಾಂಗ್ರೆಸ್ ಪರವಾಗಿರುವ ದಲಿತರಲ್ಲಿ ಗೊಂದಲ ಉಂಟಾಗುತ್ತದೆ. ಹಾಗಾಗಿ ಅವರನ್ನೇ ಮುಂದುವರೆಸಬೇಕೆಂದು ಕೆಪಿಸಿಸಿ ಕಿಸಾನ್ ಘಟಕದ ಉಪಾಧ್ಯಕ್ಷ ಡಾ.ಆನಂದ್‍ಕುಮಾರ್, ವೆಂಕಟೇಶ್‍ಮೂರ್ತಿ ಸೇರಿದಂತೆ ಮತ್ತಿತರ ದಲಿತ ಮುಖಂಡರು ಮನವಿ ಮುಖೇನ ಹೈಕಮಾಂಡ್‍ಗೆ ಆಗ್ರಹಿಸಿದ್ದಾರೆ.


ಇತ್ತಿಚೆಗೆ ಸರ್ಕಾರ ನಡೆಸಿರುವ ಸಾಮಾಜಿಕ, ಆರ್ಥಿಕ ಗಣತಿಯಲ್ಲಿ ದಲಿತರ ಸಂಖ್ಯೆ ಅತಿ ಹೆಚ್ಚು ಇರುವ ಮಾಹಿತಿ ಇದೆ. ಸುಮಾರು 1.8 ಕೋಟಿಯಷ್ಟು ದಲಿತರು ರಾಜ್ಯದಲ್ಲಿದ್ದು, ಈ ಸಮುದಾಯ ಯಾವತ್ತೂ ಕಾಂಗ್ರೆಸ್ ಪರವಾಗಿಯೇ ಇದೆ. ಪ್ರಸ್ತುತ ಅಧ್ಯಕ್ಷರಾಗಿರುವ ಪರಮೇಶ್ವರ್ ಅವರು ಆರು ವರ್ಷಗಳ ಕಾಲ ಪಕ್ಷವನ್ನು ಸಮರ್ಥವಾಗಿ, ಆರೋಪರಹಿತವಾಗಿ ಮುನ್ನಡೆಸಿದ್ದಾರೆ.

ಚುನಾವಣಾ ಹೊಸ್ತಿಲಲ್ಲಿ ಇರುವ ಸಂದರ್ಭದಲ್ಲಿ ಅಧ್ಯಕ್ಷರನ್ನು ಬದಲಾವಣೆ ಮಾಡುವ ನಿರ್ಧಾರ ಕೈಗೊಳ್ಳಬಾರದು. ಅವರನ್ನೇ ಮುಂದುವರೆಸಿದರೆ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬರಲು ಅವಕಾಶವಾಗುತ್ತದೆ. ದಲಿತ ಶಕ್ತಿ ಪಕ್ಷಕ್ಕೆ ಬೆಂಬಲವಾಗಿ ನಿಲ್ಲುತ್ತದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin