ಕೆಮ್ಮು-ಎದೆನೋವು ಕಾಣಿಸಿಕೊಂಡರೆ ನಿರ್ಲಕ್ಷಿಸದಿರಿ, ಆಸ್ಪತ್ರೆಯಲ್ಲಿ ಪರಿಕ್ಷೇ ಮಾಡಿಸಿ

ಈ ಸುದ್ದಿಯನ್ನು ಶೇರ್ ಮಾಡಿ

turvekere

ತುರುವೇಕೆರೆ, ಮಾ.25-ಹಲವು ದಿನಗಳಿಂದ ಕೆಮ್ಮು ಎದೆರೋಗ ಕಾಣಿಸಿಕೊಂಡರೇ ಕೂಡಲೇ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪರಿಕ್ಷೇ ಮಾಡಿಸಿಕೊಳ್ಳಿ ಎಂದು ಡಾ|| ನಾಗರಾಜ್ ತಿಳಿಸಿದರು.ರಾಷ್ಟ್ರೀಯ ಕ್ಷಯ ರೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕ್ಷಯ ರೋಗವು ಮೈಕೋ ಬ್ಯಾಕ್ಟೀರಿಯಂ ಟ್ಯುಬರ್ ಕ್ಯುಲೋಸಿಸ್ ಎಂಬ ಸೂಕ್ಷ್ಮ ರೋಗಾಣುವಿನಿಂದ ಬರುತ್ತದೆ, ರೋಗಿಗಳು ಕೆಮ್ಮಿದಾಗ ಅಥವಾ ಸೀನಿದಾಗ ಹೊರಬರುವ ತುಂತುರುಗಳಿಂದ ಈ ರೋಗಾಣುಗಳು ಗಾಳಿಯ ಮೂಲಕ ಆರೋಗ್ಯವಂತ ವ್ಯಕ್ತಿಯ ಶ್ವಾಸಕೋಶ ಸೇರಿ ಅವನಿಗೂ ಸೋಂಕು ಉಂಟಾಗುವ ಸಂಬವ ಹೆಚ್ಚಿರುತ್ತದೆ ಎಂದರು.

ಈ ರೋಗದವರಿಗೆ ಸಂಜೆ ವೇಳೆ ಜ್ವರ ಹೆಚ್ಚಾಗಿಬರುವುದು, ಎದೆ ನೋವು, ತೂಕ ಕಡಿಮೆಯಾಗುವುದು, ಹಸಿವಾಗದಿರುವುದು, ಕಪದಲ್ಲಿ ರಕ್ತ ಬೀಳುವುದು ರೋಗದ ಲಕ್ಷಣಗಳಾಗಿವೆ. ಕ್ಷಯ ಒಬ್ಬರಿಂದ ಒಬ್ಬರಿಗೆ ಹರಡುವ ರೋಗ, ವರ್ಷದಲ್ಲಿ 10 ರಿಂದ 15 ಜನಕ್ಕೆ ರೋಗದ ಸೋಂಕು ಹರಡುತ್ತದೆ. ಕ್ಷಯ ರೋಗವನ್ನು ಎರಡು ಭಾರಿ ಕಪವನ್ನು ಪರೀಕ್ಷೆ ಹಾಗೂ ಕ್ಷ-ಕಿರಣ ಪರೀಕ್ಷೆ ಮುಖಾಂತರ ಕಂಡು ಹಿಡಿಯಲಾಗುತ್ತದೆ. ರೋಗದ ಚಿಕಿತ್ಸೆ 6 ರಿಂದ 8 ತಿಂಗಳ ಕಾಲ ಪಡೆಯಬೇಕು, ಚಿಕಿತ್ಸೆ ರಾಜ್ಯದ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ದೊರೆಯಲಿದೆ. ನಿಯಮಿತವಾಗಿ, ನಿಗದಿತ ಅವಧಿಯವರಗೆ ಚಿಕಿತ್ಸೆ ಪಡೆದರೆ ಮಾತ್ರ ಕ್ಷಯ ರೋಗವನ್ನು ಸಂಪೂರ್ಣವಾಗಿ ಗುಣ ಪಡಿಸಬಹುದು ಎಂದರು.

ಈಲ್ಲ ನೋಡಲ್ ಅಧಿಕಾರಿ ವೆಂಕಟಲಕ್ಷ್ಮಮ್ಮ ಮಾತನಾಡಿ ಕ್ಷಯವನ್ನು ಗುಂಡಿ ತೊಡಿ ಮುಚ್ಚಬೇಕು ಇದರಿಂದ ಕ್ಷಯ ರೋಗ ತಡೆಗಟ್ಟುಬಹುದು. ಕೇವಲ 6 ತಿಂಗಳಲ್ಲಿ ಸರಿಯಾದ ಚಿಕಿತ್ಸೆಯಿಂದ ಗುಣಪಡಿಸಿಕೊಳ್ಳಬಹುದು. ಆದ್ದರಿಂದ ನಿಮ್ಮ ಮನೆಯಲ್ಲಿ ಅಥವಾ ಅಕ್ಕಪಕ್ಕದ ಮನೆಗಳಲ್ಲಿ ಕ್ಷಯ ರೋಗದ ಲಕ್ಷಣ ಗುಣ ಉಳ್ಳವರು ಕಂಡು ಬಂದಲ್ಲಿ ಹತ್ತಿರದ ಸಾರ್ವಜನಿಕ ಆಸ್ಪತ್ರೆ ಕೇಂದ್ರದಲ್ಲಿ ಪರೀಕ್ಷೆ ಮಾಡಿಸಿಕೊಳ್ಳುಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ತಾಲೂಕು ವೈದ್ಯಾಧಿಕಾರಿ ಡಾ.ತಿರುಪತಯ್ಯ, ಕ್ಷೇತ್ರ ಆರೋಗ್ಯ ಚಂದ್ರಶೇಖರ್ ಮಾತನಾಡಿ ಅರಿವು ಮೂಡಿಸಿದರು. ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರದೀಪ್ ಗುಪ್ತಾ, ಕೆಎಸ್‍ಆರ್‍ಟಿಸಿ ಲಕ್ಷ್ಮಣ್ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಶ್ರೀನಿವಾಸಗೌಡ, ಆರೋಗ್ಯಾಧಿಕಾರಿಗಳಾದ ಹೊನ್ನಮ್ಮ, ಬೋರೇಗೌಡ, ಪ್ರವೀಣ್, ಗುರುರಾಜ್, ಪ್ರಮೀಳ,ಗಿಡ್ಡೇಗೌಡ, ಲ.ಶ್ರೀನಿವಾಸ್, ಲ.ಮಹೇಶ್ ಸೇರಿದಂತೆ ಇತರರು ಇದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin