ಕೆರಳಿ ಕೆಂಡ ಕಾರಿದಳಾ ರಾಖಿ

ಈ ಸುದ್ದಿಯನ್ನು ಶೇರ್ ಮಾಡಿ

Rakhia

ಬಾಲಿವುಡ್‍ನ ಐಟಂ ಗರ್ಲ್ ಮತ್ತು ನಟಿ ರಾಖಿ ಸಾವಂತ್ ಸೆನ್ಸಾರ್ ಮಂಡಳಿ ವಿರುದ್ಧ ತಿರುಗಿ ಬಿದ್ದಿದ್ದಾಳೆ. ಆಕೆ ನಟಿಸಿರುವ ಏಕ್ ಕಹಾನಿ ಜೂಲಿ ಕೀ ಎಂಬ ಸಿನಿಮಾಗೆ ಸೆನ್ಸಾರ್ ಬೋರ್ಡ್ ಎ ಸರ್ಟಿಫಿಕೇಟ್ ನೀಡಿರುವುದೇ ರಾಖಿ ರೋಸಿ ಹೋಗಿ ಕೆಂಡಕಾರಲು ಕಾರಣ. ಸೆನ್ಸಾರ್ ಬೋರ್ಡ್‍ನ ಅಧ್ಯಕ್ಷ ಪಲ್ಹಾಜ್ ನಿಹಲಾನಿ ಲಂಚಕ್ಕಾಗಿ ಈ ಕ್ಯಾತೆ ತೆಗೆದಿದ್ದಾರೆ. ನಾನು ಅವರ ಮನೆಗೆ ನುಗ್ಗಿ ಮಾನ-ಮಾರ್ಯಾದೆ ತೆಗೆಯುತ್ತೇನೆ ಎಂದು ಧಮಕಿ ಹಾಕಿದ್ದಾಳೆ. ಮೊದಲು ಯು/ಎ ಪ್ರಮಾಣಪತ್ರವಿದ್ದ ಚಿತ್ರಕ್ಕೆ ಎ ಸರ್ಟಿಫಿಕೇಟ್ ಕೊಟ್ಟಿರುವುದರಿಂದ ರಾಖಿ ಕೆರಳಿದ್ದಾಳೆ.
ನಾನು ಸನ್ನಿ ಲಿಯೋನ್‍ಳಂತೆ ನೀಲಿ ಚಿತ್ರದ ನಟಿಯಲ್ಲ ಎಂದೂ ಆಕೆಯನ್ನೂ ಈ ವಿವಾದಕ್ಕೆ ಎಳೆದಿದ್ದಾಳೆ. ದೊಡ್ಡ ಬ್ಯಾನರ್‍ಗಳಿಂದ ದುಡ್ಡು ಪಡೆಯುವ ಸೆನ್ಸಾರ್ ಮಂಡಳಿ ಬಡ ನಿರ್ಮಾಪಕರಿಂದ ಹಣ ಸುಲಿಗೆ ಮಾಡುತ್ತಿದೆ. ಬೋರ್ಡ್ ನಲ್ಲಿರುವ ಮಂದಿ ಅಸಮರ್ಥರು. ನಿಹಲಾನಿಗೆ ಏನೂ ಗೊತ್ತಿಲ್ಲ. ಆತ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ನಾನು ಆ ಸ್ಥಾನದಲ್ಲಿ ಕುಳಿತು ನಿರ್ಮಾಪಕರಿಗೆ ನ್ಯಾಯ ಒದಗಿಸುತ್ತೇನೆ ಎಂದು ಈ ಎದೆಗಾತಿ ಬಿಚ್ಚು ಮಾತುಗಳನ್ನಾಗಿದ್ದಾಳೆ. ನಾವು ಹಣ ನೀಡಲಿಲ್ಲ ಎಂಬ ಕಾರಣಕ್ಕಾಗಿ ಈ ರೀತಿ ಮಾಡಿದ್ದಾರೆ. ನಾನು ಈ ಸಿನಿಮಾದಲ್ಲಿ ನಟಿಸಿದ್ದೇನೆ ಎಂಬ ಕಾರಣಕ್ಕಾಗಿ ಎ ಸರ್ಟಿಫಿಕೇಟ್ ನೀಡಲಾಗಿದೆ. ನಾನು ಈ ದೇಶದ ಮಗಳು, ಬಾಲಿವುಡ್ ತಾರೆ, ಚಿತ್ರ ನಟಿ. ನಾನು ಐಟಂ ಗರ್ಲ್ ಆಗಿದ್ದೇ ಹೊರತು ಸನ್ನಿ ಲಿಯೋನ್‍ನಂತೆ  ಸ್ಟಾರ್ (ನೀಲಿ ಚಿತ್ರದ ನಟಿ) ಅಲ್ಲ ಎಂದು ಗುಡುಗಿದ್ದಾಳೆ.

 

► Follow us on –  Facebook / Twitter  / Google+

 

Facebook Comments

Sri Raghav

Admin