ಕೆರೆಕಟ್ಟೆಗಳಿಗೆ ನೀರು ಹರಿಸಲು ಆಗ್ರಹಿಸಿ ಹೇಮಾವತಿ ಕಚೇರಿಗೆ ಮುತ್ತಿಗೆ

ಈ ಸುದ್ದಿಯನ್ನು ಶೇರ್ ಮಾಡಿ

kr--pete5

ಕೆ.ಆರ್.ಪೇಟೆ,ಸೆ.3- ಕಳೆದ ಒಂದು ವಾರದಿಂದಲೂ ತಾಲೂಕಿನ ಹೇಮಾವತಿ ನಾಲೆಗಳಲ್ಲಿ ನೀರು ಅಪಾರ ಪ್ರಮಾಣದಲ್ಲಿ ಹರಿಯುತ್ತಿದ್ದು, ಕೆರೆ-ಕಟ್ಟೆಗಳಿಗೆ ನೀರು ತುಂಬಿಸಲು ಕ್ರಮ ವಹಿಸಬೇಕೆಂದು ಆಗ್ರಹಿಸಿ ತಾಲೂಕಿನ ವಿವಿಧ ಗ್ರಾಮಗಳ ನೂರಾರು ರೈತರು ಪಟ್ಟಣದ ಹೇಮಾವತಿಇಲಾಖೆಯ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.ಹೊಸಹೊಳಲು, ಮರುವನಹಳ್ಳಿ, ಸಿಂಧುಘಟ್ಟ, ಹರಳಹಳ್ಳಿ, ಅಗ್ರಹಾರಬಾಚಹಳ್ಳಿ, ಚೌಡೇನಹಳ್ಳಿ, ಮತ್ತಿಘಟ್ಟ, ನಾರ್ಗೋನಹಳ್ಳಿ, ಗೋವಿಂದೇಗೌಡನಕೊಪ್ಪಲು, ವಳಗೆರೆಮೆಣಸ ಮತ್ತಿತರರ ಗ್ರಾಮಗಳ ನೂರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡು ನೀರಿಗಾಗಿ ಆಗ್ರಹಿಸಿದರು.

ನಾಲಾ ವ್ಯಾಪ್ತಿಯಲ್ಲಿ ಒಟ್ಟು 60ಕ್ಕು ಹೆಚ್ಚು ಕೆರೆ-ಕಟ್ಟೆಗಳಿವೆ ಈ ಪೈಕಿ ಸಿಂಧುಘಟ್ಟ, ಹರಳಹಳ್ಳಿ ಕೆರೆಗಳು ಮಾತ್ರ ಅರ್ಧ ತುಂಬಿವೆ. ಆದರೆ ಉಳಿದ ಯಾವುದೇ ಕೆರೆಗಳಿಗೂ ನೀರು ಬಿಟ್ಟಿಲ್ಲ ಇದೇನಾ ನೀರಾವರಿ ಅಧಿಕಾರಿಗಳ ರೈತರ ಪರವಾದ ನಿಲುವು ಎಂದು ಕಿಡಿಕಾರಿದರು.  ಕೆರೆ-ಕಟ್ಟೆಗಳಿಗೆ ನೀರು ಬಿಡಿ ಎಂದರೆ ಮೊದಲು ಹೊಳೆನರಸೀಪುರ ತಾಲೂಕಿನ ಕೆರೆಗಳು ಭರ್ತಿಯಾಗಬೇಕು.ನಂತರ ಬಿಡುತ್ತೇವೆ ಎನ್ನುತ್ತಾರೆ. ಹೀಗೆ ಎರಡೂ ಕಡೆಗಳಲ್ಲಿಯೂ ವಿಭಿನ್ನ ನಿಲುವು ಹೊಂದಿರುವ ನೀರಾವರಿ ಅಧಿಕಾರಿಗಳಿಂದ ತಾಲೂಕಿನ ರೈತರಿಗೆ ಮಹಾ ಮೋಸ ಮತ್ತು ಅನ್ಯಾಯವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ತಾಲೂಕು ರೈತ ಸಂಘದ ಅಧ್ಯಕ್ಷ ಮರುವನಹಳ್ಳಿ ಶಂಕರ್, ರೈತ ಮುಂಡರಾದ ಕಾರಿಗನಹಳ್ಳಿ ಪುಟ್ಟೇಗೌಡ, ಚೌಡೇನಹಳ್ಳಿಕೃಷ್ಣೇಗೌಡ, ಬೂಕನಕೆರೆ ನಾಗರಾಜು, ಎಲ್.ಬಿ.ಜಗದೀಶ್, ಹೊಸಹೊಳಲು ರಾಮೇಗೌಡ, ಚಿಕ್ಕೇಗೌಡ, ಡೈರಿಚಂದ್ರೇಗೌಡ, ಹೆಚ್.ಆರ್.ನಂದಕುಮಾರ್, ಪಿ.ಎಲ್.ಡಿ.ಬ್ಯಾಂಕ್ ನಿರ್ದೇಶಕ ಎನ್.ಟಿ.ನಾಗರಾಜು, ಕುಮಾರ್, ಹೆಚ್.ಎಸ್.ಮಂಜುನಾಥ್, ಹೆಚ್.ಎಸ್.ನಾಗರಾಜು, ಹಕ್ಕಿಮಂಚನಹಳ್ಳಿ ಹೊನ್ನೇಗೌಡ, ಎನ್.ಪ್ರಕಾಶ್, ಮತ್ತಿತರರು ಪ್ರತಿಭಟನೆ ನೇತೃತ್ವ ವಹಿಸಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin