ಕೆರೆಗಳಿಗೆ ನೀರು ತುಂಬಿಸಲು ಆಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

MB--PATIL

ಕಡೂರು, ಜ.9- ಎತ್ತಿನಹೊಳೆ ಯೋಜನೆಯಡಿ ತಾಲ್ಲೂಕಿನ 25 ಕೆರೆಗಳಿಗೆ ನೀರು ತುಂಬಿಸುವಂತೆ ರಾಜ್ಯ ರೈತ ಸಂಘ ಹಸಿರು ಸೇನೆ ತಾಲ್ಲೂಕು ಸಮಿತಿ ಮುಖಂಡರು ಬೃಹತ್ ನೀರಾವರಿ ಸಚಿವ ಎಂ.ಬಿ. ಪಾಟೀಲ್ ಅವರನ್ನು ಭೇಟಿ ಮಾಡಿ ಒತ್ತಾಯಿಸಿದ್ದಾರೆ. ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಮುಖಂಡರಾದ ಎಂ. ನಿರಂಜನಮೂರ್ತಿ, ಆರ್.ಟಿ. ಮಹೇಶ್ವರಪ್ಪ, ಜಗದೀಶ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.ತಾಲ್ಲೂಕಿನ ಮುತ್ತಾಣಗೆರೆ, ಶೆಟ್ಟಿಹಳ್ಳಿ, ಕಂಚುಗಲ್, ಸಿಂಗಟಗೆರೆ, ಆಲದಹಳ್ಳಿ, ಕೆರೆಸಂತೆ, ಪಂಚನಹಳ್ಳಿ, ಮಲ್ಲಾಘಟ್ಟ, ಸೋಮನಹಳ್ಳಿ, ಎಸ್.ಮಾದಾಪುರ, ಕುಂದೂರು, ಚಟ್ನಹಳ್ಳಿ, ನಿಡುವಳ್ಳಿ, ಉಪ್ಪಿನಹಳ್ಳಿ, ಬಿಟ್ಟೇನಹಳ್ಳಿ, ಸಾದರಹಳ್ಳಿ, ಬಿ.ಟಿ. ಮಲ್ಲೇನಹಳ್ಳಿ, ಬಳ್ಳೇಕೆರೆ, ಮತಿಘಟ್ಟ, ದೇವರಹಳ್ಳಿ, ಬಿ.ಎಂ. ಕೊಪ್ಪಲು ಹಾಗೂ ತಂಗಲಿ ಗ್ರಾಮಗಳ ಕೆರೆಗಳಿಗೆ ಎತ್ತಿನಹೊಳೆ ಯೋಜನೆಯಿಂದ ನೀರು ತುಂಬಿಸುವಂತೆ ಸರ್ಕಾರವನ್ನು ಕೋರಲಾಗಿದೆ.

ಬರಗಾಲದಿಂದ ತತ್ತರಿಸುತ್ತಿರುವ ತಾಲ್ಲೂಕಿನ ರೈತರ ಬೆಳೆಗಳು ನೀರಿಲ್ಲದೆ ಒಣಗುತ್ತಿವೆ, ಈ ಭಾಗದ ಆರ್ಥಿಕ ಬೆಳೆಗಳಾದ ತೆಂಗು, ಅಡಿಕೆ ಒಣಗಿ ಹೋಗಿ, ರೈತನ ಆರ್ಥಿಕ ಸ್ಥಿತಿ ಹದೆಗಟ್ಟಿದೆ, ಅಂತರ್ಜಲದ ಮಟ್ಟ ಸಾವಿರ ಅಡಿಗೆ ಕುಸಿದಿದ್ದು, ರೈತರು ಕೂಲಿ-ನಾಲಿಗಾಗಿ ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿರುವುದು ವಿಪರ್ಯಾಸ. ಎತ್ತಿನಹೊಳೆ ಯೋಜನೆಯಿಂದ ಅರಸೀಕೆರೆಯ ಸುಮಾರು 30 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಸಿದ್ದವಾಗಿದೆ, ಇದರ ಜೊತೆಗೆ ಕಡೂರು ತಾಲ್ಲೂಕಿನ ಈ 25 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಸರ್ಕಾರ ಮುಂದಾಗಬೇಕೆಂದು ಸಚಿವರಿಗೆ ಒತ್ತಾಯಿಸಲಾಗಿದೆ ಎಂದು ಹೇಳಿದರು.ತಾಲ್ಲೂಕಿನ ನೀರಾವರಿ ಯೋಜನೆಗಳ ಜಾರಿಗೆ ಕುರಿತಂತೆ ರೈತ ಸಂಘ ಮತ್ತು ಹಸಿರು ಸೇನೆ ಪಕ್ಷಾತೀತವಾಗಿ ಹೋರಾಡಲು ನಿರ್ಧರಿಸಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.ಮುಖಂಡರಾದ ಕೆ.ಎಸ್. ಶೇಖರಪ್ಪ, ಕೆ.ಜಿ. ಲೋಕೇಶಪ್ಪ, ಕಲ್ಲೇಶಪ್ಪ, ಶಶಿಕುಮಾರ್ ಮುಂತಾದವರು ಉಪಸ್ಥಿತರಿದ್ದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin