ಕೆರೆಯಲ್ಲಿ ಬಟ್ಟೆ ತೊಳೆಯುತ್ತಿದ್ದ ತಾಯಿ, ಮಗಳು ಸೇರಿ ನಾಲ್ವರು ನೀರು ಪಾಲು

ಈ ಸುದ್ದಿಯನ್ನು ಶೇರ್ ಮಾಡಿ

Suicide-Water-02

ರಾಮನಗರ,ನ.18- ಬಟ್ಟೆ ತೊಳೆಯಲೆಂದು ತೆರಳಿದ್ದ ತಾಯಿ, ಮಗಳು ಸೇರಿ ನಾಲ್ವರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಅಕ್ಕೂರು ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.  ವಿರೂಪಾಕ್ಷಿಪುರ ಗ್ರಾಮದ ನಿವಾಸಿಗಳಾದ ಮಾಲತಿ(35), ಪೂರ್ಣಿಮಾ(15), ಅನುಶ್ರೀ(10), ನಮ್ರತಾ(8) ಮೃತಪಟ್ಟ ದುರ್ದೈವಿಗಳು.

ಇಂದು ಬೆಳಗ್ಗೆ ಬಟ್ಟೆ ತೊಳೆಯಲೆಂದು ಗ್ರಾಮದ ಕೆರೆಯೊಂದಕ್ಕೆ ಮಾಲತಿ ತನ್ನ ಮಗಳು ಪೂರ್ಣಿಮಾಳೊಂದಿಗೆ ತೆರಳಿದ್ದಾರೆ. ಈ ವೇಳೆ ಪಕ್ಕದ ಮನೆಯ ಅನುಶ್ರೀ, ನಮ್ರತಾ ಕೂಡ ಅವರೊಂದಿಗೆ ತೆರಳಿದ್ದು , ಕೆರೆಯಲ್ಲಿ ಬಟ್ಟೆ ತೊಳೆಯುತ್ತಿದ್ದಾಗ ನಾಲ್ವರೂ ಮುಳುಗಿ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಶವಗಳನ್ನು ಹೊರೆತೆಗೆಲಾಗಿದೆ. ಅಕ್ಕೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments

Sri Raghav

Admin