ಕೆರೆ ಒತ್ತುವರಿ ತೆರವು ಕುರಿತು ಇನ್ನೂ ತೀರ್ಮಾನಿಸಿಲ್ಲ : ಕೆ.ಬಿ.ಕೋಳಿವಾಡ

ಈ ಸುದ್ದಿಯನ್ನು ಶೇರ್ ಮಾಡಿ

koliwada
ಬೆಂಗಳೂರು,ಆ.29- ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿ ಯಾವ ಕೆರೆಗಳನ್ನು ತೆರವು ಮಾಡಬೇಕು, ಯಾವ ಕೆರೆ ತೆರವು ಮಾಡಬಾರದು ಎಂದು ಇನ್ನೂ ಕೆರೆ ಒತ್ತುವರಿ ಮತ್ತು ಸಂರಕ್ಷಣೆಗೆ ಸಂಬಂಸಿದಂತೆ ಸದನ ಸಮಿತಿ ಇನ್ನೂ ತೀರ್ಮಾನಿಸಿಲ್ಲ ಎಂದು ಸಮಿತಿ ಅಧ್ಯಕ್ಷರೂ ಆಗಿರುವ ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡ ತಿಳಿಸಿದರು. ಕೆರೆ ಒತ್ತುವರಿಗೆ ಸಂಬಂಸಿದಂತೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಐತಿಹಾಸಿಕ ದಾಖಲೆಯಾಗುವ ರೀತಿಯಲ್ಲಿ ವರದಿಯನ್ನು ಸಮಿತಿ ನೀಡಲಿದೆ ಎಂದ ಅವರು, ಈಗಾಗಲೇ 8ಸಾವಿರ ಪುಟಗಳ ಮಾಹಿತಿ ಸಂಗ್ರಹಿಸಲಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು. ನೈಸ್ ಸಂಸ್ಥೆಗೆ ಸಂಬಂಸಿದ ಸದನ ಸಮಿತಿ ಒಂದೆರಡು ಸಭೆ ನಡೆಸಿದ ಬಳಿಕ ವರದಿ ನೀಡಲಿದೆ. ಅದೇ ರೀತಿ ವಿದ್ಯುತ್ ಖರೀದಿ, ಅವ್ಯವಹಾರಗಳನ್ನು ಪರಿಶೀಲಿಸಲು ರಚಿತವಾಗಿರುವ ಸಮಿತಿಯೂ ಕೂಡ ಸಭೆ ನಡೆಸಲಿದೆ ಎಂದರು  ವರದಿ ನೀಹಾಗೂ ಕ್ಲಬ್‌ಗಳಿಗೆ ಸಂಬಂಸಿದ ಸಮಿತಿಯೂ ಕೂಡ ಒಂದೆರಡು ಸಭೆ ನಡೆಸಿ ವರದಿ ನೀಡಲಿದೆ ಎಂದು ಹೇಳಿದರು. ಓರಾಯನ್ ಮಾಲ್, ಇಟಿಎ ಮಾಲ್, ಮ್ಯಾರಿಯೇಟ್ ಹೊಟೇಲ್‌ ಒತ್ತುವರಿ ತೆರವಿಗೆ ಹೈಕೋರ್ಟ್ ಸೂಚನೆ

► Follow us on –  Facebook / Twitter  / Google+

Facebook Comments

Sri Raghav

Admin