ಕೆಲಕಾಲ ಆತಂಕ ಸೃಷ್ಟಿಸಿತ್ತು ಮೆಟ್ರೊ ರೈಲು ಹಳಿ ಬಳಿ ಕಾಣಿಸಿಕೊಂಡ ದಟ್ಟ ಹೊಗೆ

ಈ ಸುದ್ದಿಯನ್ನು ಶೇರ್ ಮಾಡಿ

Metro-01

ಬೆಂಗಳೂರು,ಅ.24– ಬೀದಿಬದಿ ನಿವಾಸಿಗಳು ಹಚ್ಚಿದ ಬೆಂಕಿಯಿಂದಾಗಿ ಮೆಟ್ರೋ ಸಿಬ್ಬಂದಿ ಕೆಲಕಾಲ ಆತಂಕಕ್ಕೀಡಾಗಿದ್ದರು. ಇಂದು ವಿಜಯನಗರದ ಮನುವನ ಬಳಿಯ ಹೊಸಹಳ್ಳಿ ಮೆಟ್ರೋ ರೈಲು ನಿಲ್ದಾಣ ಸಮೀಪ ದಟ್ಟಹೊಗೆ ಕಾಣಿಸಿಕೊಂಡಿದೆ. ಮೆಟ್ರೋ ಪಿಲ್ಲರ್ ಬಳಿ ಮಳೆ ನೀರು ಕೊಯ್ಲು ಪೈಪ್ ಕೆಳಭಾಗದಲ್ಲಿ ಬೀದಿಬದಿ ನಿವಾಸಿಗಳು ಬೆಂಕಿ ಹಚ್ಚಿದ್ದರು. ಹೀಗಾಗಿ ದಟ್ಟಹೊಗೆ ಕಾಣಿಸಿಕೊಂಡಿದೆ.  ಏಕಾಏಕಿ ಹೊಗೆ ಕಂಡ ಮೆಟ್ರೊ ಅಧಿಕಾರಿಗಳು ಆತಂಕಗೊಂಡು ಅಗ್ನಿಶಾಮಕ ದಳಕ್ಕೆ ತಿಳಿಸಿದರು.  ಅಗ್ನಿಶಾಮಕ ದಳ ಸ್ಥಳಕ್ಕಾಗಮಿಸಿ ಸ್ಥಳ ಪರಿಶೀಲನೆ ನಡೆಸಿದರು. ಬೀದಿಬದಿ ನಿವಾಸಿಗಳು ಬೆಂಕಿ ಹಚ್ಚಿದ್ದನ್ನು ತಿಳಿದು ಮೆಟ್ರೋ ಸಿಬ್ಬಂದಿ ನಿರಾಳರಾದರು.

► Follow us on –  Facebook / Twitter  / Google+

Facebook Comments

Sri Raghav

Admin