ಕೆಲಸಕ್ಕೆ ಬಾಲಕರ ನಿಯೋಜಿಸಿದರೆ ಕಠಿಣ ಕ್ರಮ

ಈ ಸುದ್ದಿಯನ್ನು ಶೇರ್ ಮಾಡಿ

ಬೇಲೂರು, ಮಾ.30-ಪಟ್ಟಣ, ನಗರ ಪ್ರದೇಶಗಳ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳಲ್ಲಿ ಹಾಗೂ ಅಪಾಯಕಾರಿ ಉದ್ದಿಮೆಗಳಲ್ಲಿ ಬಾಲಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಂಡಲ್ಲಿ ಅಂತಹವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಾಗುವುದು ಎಂದು ಕಂದಾಯ ಇಲಾಖೆ ಶಿರಸ್ತೇದಾರ್ ಕೃಷ್ಣಮೂರ್ತಿ ಎಚ್ಚರಿಸಿದರು.ಕರ್ನಾಟಕ ಸರ್ಕಾರ, ಜಿಲ್ಲಾಡಳಿತ ಮತ್ತು ಡಿಸ್ಟ್ರಿಕ್ಟ್ ಚೈಲ್ಡ್ ಪ್ರಾಜೆಕ್ಟ್ ಸೊಸೈಟಿ ಹಾಸನ ಇವರ ಸಂಯುಕ್ತಾಶ್ರಯದಲ್ಲಿ ಬೇಲೂರು ಪಟ್ಟಣದ ವಿವಿಧೆಡೆ ಬಾಲ ಕಾರ್ಮಿಕ ಪದ್ದತಿಯನ್ನು ನಿಷೇದಿಸಿರುವ ಬಗ್ಗೆ ಜಾಗೃತಿ ಮೂಡಿಸಲು ಆಯೋಜಿಸಿದ್ದ ಬೀದಿ ನಾಟಕಕ್ಕೆ ಚಾಲನೆ ನೀಡಿ ಮಾತನಾ ಡಿದರು.ಬಾಲ ಕಾರ್ಮಿಕ ಪದ್ದತಿ ನಿರ್ಮೂಲನೆಗೆ ಸಾರ್ವಜನಿಕರು ಸಹಕರಿಸಬೇಕು.

ಮಕ್ಕಳ ಮೇಲಿನ ಹಿಂಸೆ ಮತ್ತು ಅತ್ಯಾಚಾರ, ಬೀದಿ ಮಕ್ಕಳು, ಮನಸಿಕ ವಿಕಲ ಚೇತನ ಮಕ್ಕಳು, ಬಾಲ್ಯ ವಿವಾಹ, ಕಾಣೆಯಾದ ಮಕ್ಕಳು, ಮಾದಕ ವಸ್ತು ವ್ಯಸನಿಗಳು, ಬಾಲ ಕಾರ್ಮಿಕರು ಹಾಗೂ ನಿರ್ಗತಿಕರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳನ್ನು ರೂಪಸಿದ್ದು ಇಂತಹ ಮಕ್ಕಳು ಕಂಡು ಬಂದರೆ ಸಾರ್ವಜನಿಕರು ಚೈಲ್ಡ್‍ಲೈನ್ 1098ಕ್ಕೆ ಕರೆ ಮಾಡುವ ಮೂಲಕ ಬಾಲ ಕಾರ್ಮಿಕರಿಂದ ದುಡಿಸುವುದನ್ನು ತಪ್ಪಿಸ ಬಹುದಾಗಿದೆ. ಆದ್ದರಿಂದ ಯಾರೂ ಸಹ ಬಾಲಕಾರ್ಮಿಕರನ್ನು ಬಳಸಿಕೊಳ್ಳ ಬಾರದು ಎಂದರು.ನಂತರ ಮಾತನಾಡಿದ ಕಾರ್ಮಿಕ ಇಲಾಖೆಯ ಹಿರಿಯ ಕಾರ್ಮಿಕ ನಿರೀಕ್ಷಕ ಜಿ.ಕೈನೂರ್ ಮಾತನಾಡಿದರು. ಹಾಸನದ ಬಿ.ಟಿ.ಮಾನವ ತಂಡದ ಕಲಾವಿದರು ಪಟ್ಟಣದ ವಿವಿದ ಬಡಾವಣೆಗಳಲ್ಲಿ ಬಾಲ ಕಾರ್ಮಿಕ ಪದ್ಧತಿ  ಬಗ್ಗೆ ಬೀದಿ ನಾಟಕ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin