ಕೆಸರುಗದ್ದೆ ಯಾದ ತರಕಾರಿ ಮಾರುಕಟ್ಟೆ..!

ಈ ಸುದ್ದಿಯನ್ನು ಶೇರ್ ಮಾಡಿ

market

ಚಿಂತಾಮಣಿ, ಮೇ 5-ಪ್ರಮುಖ ವಾಣಿಜ್ಯ ಕೇಂದ್ರ ಎಂಬ ಹೆಸರು ಪಡೆದಿರುವ ನಗರದಲ್ಲಿ ಮಳೆ ಬಂದರೆ ಇಲ್ಲಿನ ಎಪಿಎಂಸಿ ತರಕಾರಿ ಮಾರುಕಟ್ಟೆಯ ದುಸ್ಥಿತಿಯಂತೂ ಹೇಳತೀರದಾಗಿದೆ .ಒಂದು ದಿನ ಮಳೆ ಬಂದರೆ ಕೆಸರುಗದ್ದೆಯಾಗಿ ವಾಹನಗಳು ಸೇರಿದಂತೆ ಜನರು ಓಡಾಡಲಿಕ್ಕೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಮಳೆ ಬಿದ್ದಾಗಲೆಲ್ಲ ತರಕಾರಿ ಮಾರುಕಟ್ಟೆಯ ರಸ್ತೆಗಳೆಲ್ಲಾ ಕೆಸರುಗದ್ದೆಯಾಗುತ್ತಿದ್ದು, ಈಬಗ್ಗೆ ಹಲವಾರು ಬಾರಿ ಎಪಿಎಂಸಿ ಮಾರುಕಟ್ಟೆಯ ವ್ಯಾಪಾರಿಗಳು, ರೈತರು ಮತ್ತು ಹಮಾಲಿಗಳು ಎಪಿಎಂಸಿ ಅಧಿಕಾರಿಗಳ ಹಾಗೂ ಚುನಾಯಿತ ಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.

ನೂತನವಾಗಿ ಆಯ್ಕೆಯಾಗಿರುವ ಎಪಿಎಂಸಿ ಚುನಾಯಿತ ಪ್ರತಿನಿಧಿಗಳ ಹದೆಗೆಟ್ಟರುವ ಇಲ್ಲಿನ ಎಪಿಎಂಸಿ ತರಕಾರಿ ಮಾರುಕಟ್ಟೆಯ ರಸ್ತೆ ಮತ್ತು ಚರಂಡಿಗಳಿಗೆ ಈಗಲಾದರೂ ಗಮನಹರಿಸಿ ರೈತರು, ವ್ಯಾಪಾರಸ್ಥರು ಮತ್ತು ಕೂಲಿಯಾಳುಗಳು ರೋಗ ರುಜಿನುಗಳಿಂದ ದೂರ ಮಾಡಲು ಮುಂದಾಗುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin