ಕೆಸಿ ವ್ಯಾಲಿ ಯೋಜನೆಯಿಂದ ಅಂತರ್ಜಲ ವೃದ್ಧಿ : ಸಚಿವ ಕೆ.ಆರ್.ರಮೇಶ್ ಕುಮಾರ್

ಈ ಸುದ್ದಿಯನ್ನು ಶೇರ್ ಮಾಡಿ

ramesh--kumar

 

ಕೋಲಾರ, ಆ.29-ಕೆ.ಸಿ. ವ್ಯಾಲಿ ನೀರನ್ನು ಜಿಲ್ಲೆಯ ಕೆರೆಗಳಿಗೆ ಹರಿಸುವುದರಿಂದ ಕೊಳವೆ ಬಾವಿಗಳು ಮರುಪೂರ್ಣ ಆಗುವ ಮೂಲಕ ನೀರಿನ ಆಹಾಕಾರ ಸ್ವಲ್ಪ ಮಟ್ಟಿಗೆ ಕಡಿಮೆ ಆಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಆರ್.ರಮೇಶ್‍ಕುಮಾರ್ ತಿಳಿಸಿದರು.ತಾಲ್ಲೂಕಿನ ಆಲವಟ್ಟ ಕೆರೆಯಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯತ್ ಹಾಗೂ ಸಣ್ಣ ನೀರಾವರಿ ಇಲಾಖೆಯು ಹಮ್ಮಿಕೊಂಡಿದ್ದ ಕೆ.ಸಿ.ವ್ಯಾಲಿ ನೀರನ್ನು ಜಿಲ್ಲೆಯ ಕೆರೆಗಳಿಗೆ ನೀರು ಹರಿಸುವ ಯೋಜನೆ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಮಳೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದ್ದು ಕೆರೆಗಳೆಲ್ಲಾ ಬತ್ತಿ ಹೋಗಿವೆ. ಕೆರೆಯಲ್ಲಿ ಮುಳ್ಳುಗಿಡ ಬೆಳೆಯುವ ಸ್ಥಿತಿಗೆ ಬಂದಿವೆ. ಇದರಿಂದ ಕೆರೆಯ ಸ್ವರೂಪವೇ ಹಾಳಾಗಿ ಬಿಟ್ಟಿವೆ. ಇದೀಗ ಕೆ.ಸಿ. ವ್ಯಾಲಿ ನೀರನ್ನು ಜಿಲ್ಲೆಯ 121 ಕೆರೆಗಳಿಗೆ ಹರಿಸುವ ಸಲುವಾಗಿ ಕೆರೆಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ ಎಂದು ತಿಳಿಸಿದರು. ಕೆಸಿ ವ್ಯಾಲಿ ಯೋಜನೆಗೆ 1300 ಕೋಟಿ ರೂಗಳನ್ನು ಸರ್ಕಾರ ಬಿಡುಗಡೆ ಮಾಡಿದೆ. ಈ ಯೋಜನೆಯು ವೇಗವಾಗಿ ನಡೆಯುತ್ತಿದೆ. ಬೆಂಗಳೂರಿನ ಮೂಲಕ ಪೈಪ್ ಲೈನ್ ಹಾಕಲು ವಾಟರ್ ಬೋರ್ಡ್ ಇದಕ್ಕೆ ಅನುಮತಿ ನೀಡಬೇಕು. ಈ ನೀರನ್ನು 3 ಹಂತದಲ್ಲಿ ಶುದ್ಧೀಕರಿಸಲಾಗುವುದು. ಅದರಂತೆ 2017 ಆಗಸ್ಟ್ 15 ರೊಳಗಾಗಿ ಜಿಲ್ಲೆಯ ಕೆರೆಗಳಿಗೆ ನೀರುಣಿಸಲಾಗುವುದು ಎಂದು ಹೇಳಿದರು.

ಎತ್ತಿನ ಹೊಳೆ ಯೋಜನೆಯ ಮೂಲಕ ನೀರು ನಮಗೆ ಬರುತ್ತದೆ. ಈ ಕಾಮಗಾರಿಯು ಎಷ್ಟರ ಮಟ್ಟಿಗೆ ನಡೆಯುತ್ತಿದೆ ಎಂಬುವುದನ್ನು ಕುರಿತು ಚರ್ಚಿಸಲು ಸೆಪ್ಟಂಬರ್ 1 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಭೆ ಕರೆದಿದ್ದಾರೆ ಎಂದ ಅವರು, ಹಾಸನ ಜಿಲ್ಲೆ ಸಕಲೇಶಪುರದಿಂದ ಎತ್ತಿನಹೊಳೆ ನೀರು ಬರುತ್ತಿದ್ದು ಈ ಸಂಬಂಧ ಬೈರಕೂರಿನಲ್ಲಿ ನೀರನ್ನು ಸಂರಕ್ಷಿಸಲು 2000 ಎಕರೆ ಭೂಮಿಯನ್ನು ಗುರ್ತಿಸಲಾಗಿದೆ. ಈ ಭೂಮಿಯನ್ನು ರೈತರಿಂದ ಎಕರೆಗೆ 25 ಲಕ್ಷ ರೂ ನೀಡಿ ಕೊಂಡುಕೊಳ್ಳಬೇಕು. ಈ ಕಾಮಗಾರಿಯೂ ಪ್ರಗತಿಯಲ್ಲಿದೆ ಎಂದು ತಿಳಿಸಿದರು.  ವಿಧಾನ ಪರಿಷತ್ ಸದಸ್ಯ ತೂಪಲ್ಲಿ ಆರ್.ಚೌಡರೆಡ್ಡಿ ಮಾತನಾಡಿ, ಕೋಲಾರ ಮತ್ತು ಚಿಕ್ಕಬಳ್ಳಾಪುರದ ಜನಪ್ರತಿನಿಧಿಗಳು ಸರ್ಕಾರದ ಮೇಲೆ ಹೆಚ್ಚು ಒತ್ತಡ ಹಾಕಿದ್ದರಿಂದ ಕೆ.ಸಿ.ವ್ಯಾಲಿ ಮತ್ತು ಎತ್ತಿನ ಹೊಳೆ ಯೋಜನೆಗಳು ಜÁರಿಗೆ ತರಲಾಯಿತು. ಇದೀಗ ಎರಡೂ ಯೋಜನೆ ಕಾಮಗಾರಿಗಳು ಪ್ರಗತಿಯಲ್ಲಿದ್ದು ಇವುಗಳ ಮೂಲಕ ಅವಿಭಜಿತ ಕೋಲಾರ ಜಿಲ್ಲೆಗೆ ನೀರು ಲಭ್ಯವಾಗಲಿದೆ ಎಂದರು.

ಈ ಸಂದರ್ಭದಲ್ಲಿ ಶ್ರೀವಾಸಪುರ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸುಗುಣಮ್ಮ, ಶ್ರೀವಾಸಪುರ ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್, ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕಚಂದ್ರ, ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಬಿ.ಕಾವೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಗೋಪಿನಾಥ್, ಡಿಸಿಸಿ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ, ಆಲವಟ್ಟ ಗ್ರಾ. ಪಂ. ಅಧ್ಯಕ್ಷ ಮನೋಹರ್ ಮುಂತಾದವರು ಇದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin