ಕೆ.ಸಿ.ಪಾಳ್ಯದಲ್ಲಿ ಆನೈರ್ಮಲ್ಯ ಸ್ವಚ್ಛತೆಗೆ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

huliyaru

ಹುಳಿಯಾರು,ಆ.29- ಸಮೀಪದ ಕೆಂಕೆರೆ ಗ್ರಾಮ ಪಂಚಾಯಿತಿ ಕೆ.ಸಿ.ಪಾಳ್ಯ ಗ್ರಾಮ ಕೂಳಚೆ ನೀರಿನಿಂದ ಅನೈರ್ಮಲ್ಯ ತಾಣವಾಗಿದ್ದು ಸ್ವಚ್ಚತೆ ಕಾಪಾಡುವಂತೆ ಗ್ರಾಮಸ್ಥರು ಗ್ರಾಮ ಪಂಚಾಯ್ತಿಗೆ ಮನವಿ ಮಾಡಿದ್ದಾರೆ. ಈ ಗ್ರಾಮದಲ್ಲಿ ಅಂತರಘಟ್ಟೆ ಅಮ್ಮನವರ ಹಳೇ ದೇವಸ್ಥಾನವಿದ ಮುಂಭಾಗ ಸುಮಾರು ಐದು-ಆರು ವóರ್ಷದಿಂದ ಕೂಳಚೆ ನೀರು ನಿಂತು ಸೊಳ್ಳೆಗಳ ಆಶ್ರಯ ತಾಣವಾಗಿದೆ.

ಇನ್ನು ಕೆಲವು ಬೀದಿಗಳಲ್ಲಿ ಚರಂಡಿ ನೀರು ನಿಂತು ಸೊಳ್ಳೆಗಳು ಹೆಚ್ಚಾಗಿ ದಾರಿಯಲ್ಲಿ ಓಡಾಡಲಾಗದೆ, ಮನೆಯಲ್ಲಿ ಗಬ್ಬು ವಾಸನೆ ಸೊಳ್ಳೆಗಳ ಕಾಟದಿಂದ ನೆಮ್ಮದಿ ಇಲ್ಲದಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.  ಇನ್ನು ಗ್ರಾಮದಲ್ಲಿ ಕುಡಿಯುವ ನೀರು, ಸ್ವಚ್ಚತೆ, ಬೀದಿ ದೀಪದ ಬಗ್ಗೆ ಸರಿಯಾಗಿ ಗಮನಹರಿಸದೆ ನಿರ್ಲಕ್ಷಿಸುತ್ತಿದ್ದಾರೆ. ಗ್ರಾಮಕ್ಕೆ ಸಾಂಕ್ರಾಮಿಕ ರೋಗಗಳು ಕಾಲಿಡುವ ಮುನ್ನ ಇದಕ್ಕೆ ಸಂಬಂಧಪಟ್ಟ ಅಧಿಕಾರಿ ಗ್ರಾಮಕ್ಕೆ ಭೇಟಿ ನೀಡಿ ಪರೀಶಿಲಿಸಿ ಸ್ವಚ್ಚತೆ ಕಾಪಾಡಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin