ಕೆ.ಸಿ.ಪಾಳ್ಯದ ಆಂಜನೇಯ ಗುಡಿಗೆ 1 ಲಕ್ಷ ರೂ, ಸಹಾಯಧನ

ಈ ಸುದ್ದಿಯನ್ನು ಶೇರ್ ಮಾಡಿ

anjanayya

ಹುಳಿಯಾರು, ಅ.21-ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಹುಳಿಯಾರು ಸಮೀಪದ ಕೆಸಿಪಾಳ್ಯದ ಶ್ರೀಆಂಜನೇಯಸ್ವಾಮಿ ದೇವಸ್ಥಾನ ಕಟ್ಟಡದ ಜೀಣೋದ್ಧಾರಕ್ಕೆ 1 ಲಕ್ಷ ರೂ. ಸಹಾಯಧನ ವಿತರಿಸಲಾಯಿತು.ಯೋಜನೆಯ ಮೇಲ್ವಿಚಾರಕ ಸಂತೋಷ್ ವರು ಸಹಾಯಧನದ ಚೆಕ್ ವಿತರಿಸಿ ಮಾತನಾಡಿ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರು ರಾಜ್ಯದ 29 ಜಿಲ್ಲೆಗಳಲ್ಲಿ ಗ್ರಾಮಗಳ ದೇವಸ್ಥಾನ ಅಭಿವೃದ್ದಿ, ಶಾಲಾ ಕಟ್ಟಡ, ಶುದ್ದಕುಡಿಯುವ ನೀರು, ರಸ್ತೆ ವ್ಯವಸ್ಥೆ, ಸ್ವ ಉದ್ಯೋಗ ಸೌಲಭ್ಯಗಳಿಗೆ ಧನ ಸಹಾಯ ನೀಡುವ ಮೂಲಕ ಗ್ರಾಮಗಳ ಅಭಿವೃದ್ಧಿಗೆ ಕಾರಣರಾಗಿದ್ದಾರೆ ಎಂದರು.

ಧರ್ಮಸ್ಥಳ ಯೋಜನೆಯಿಂದ ವೈಯಕ್ತಿಕ ಲಾಭದ ಜೊತೆಗೆ ಸಮುದಾಯದ ಅಭಿವೃದ್ಧಿ ಸಹ ಮಾಡಬಹುದಾಗಿದೆ. ಈ ಮೂಲಕ ಪೂಜ್ಯರ ಗ್ರಾಮಾಭಿವೃದ್ಧಿಯ ಕನಸು ನನಸು ಮಾಡಲು ಎಲ್ಲರೂ ಶ್ರಮಿಸಬೇಕಿದೆ. ಹಾಗಾಗಿ ಪ್ರತಿಯೊಬ್ಬರೂ ಯೋಜನೆಯ ಸದಸ್ಯತ್ವ ಪಡೆದು ಯೋಜನೆಯ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕಿದೆ ಎಂದರು.ಸೇವಾಪ್ರತಿನಿಧಿ ನಾಗರತ್ನ, ಗ್ರಾಮದ ಗೌಡರಾದ ಶಿವಣ್ಣ, ಖಜಾಂಚಿ ಮಲ್ಲೇಶಯ್ಯ, ಗ್ರಾಪಂ ಸದಸ್ಯ ಕೆ.ಸಿ.ದೂಡ್ಡಯ್ಯ, ಸಿದ್ದರಾಮಯ್ಯ, ಗ್ರಾಮಸ್ಥರುಗಳಾದ ನಾಗರಾಜ್, ಕಂದಿಕೆರೆ ದುರ್ಗಯ್ಯ, ಕೆ.ಬಿ.ಜಯಣ್ಣ, ಕುರಿನಿಂಗಯ್ಯ, ಬಂಡಾರಿ ರಾಜಣ್ಣ, ಕೆ.ಎಲ್.ರೇವಣ್ಣ, ಗ್ರಾಮಸ್ಥರು ಹಾಜರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin