ಕೇಂದ್ರದಿಂದ ಸುಪ್ರೀಂಗೆ ಕೇವಿಯಟ್ ಸಲ್ಲಿಕೆ, ನ.15ರಂದು ವಿಚಾರಣೆ

ಈ ಸುದ್ದಿಯನ್ನು ಶೇರ್ ಮಾಡಿ

Supreme_Court_of_India_-_Retouched

ನವದೆಹಲಿ, ನ.10-ಕಾಳಧನ, ಖೋಟಾನೋಟು ಮತ್ತು ಭಷ್ಟ್ರಾಚಾರಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ 500 ರೂ. ಮತ್ತು 1,000 ರೂ.ಗಳ ನೋಟು ಚಲಾವಣೆ ರದ್ದುಗೊಳಿಸಿರುವ ತನ್ನ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಬಹುದಾದ ಯಾವುದೇ ಅರ್ಜಿಗೆ ಸಂಬಂಧಿಸಿದಂತೆ ತನ್ನ ವಾದವನ್ನೂ ಆಲಿಸಬೇಕು ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‍ಗೆ ಕೇವಿಯೆಟ್ ಸಲ್ಲಿಸಿದೆ. ಇದೇ ವೇಳೆ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂಕೋರ್ಟ್ ನ.15ರಂದು ವಿಚಾರಣೆ ನಡೆಸಲಿದೆ.  ನೋಟು ರದ್ದುಗೊಳಿಸಿರುವ ಸರ್ಕಾರದ ನಿಲುವನ್ನು ಪ್ರಶ್ನಿಸಿ ಸಲ್ಲಿಸಲಾಗುವ ಅರ್ಜಿಗಳಿಗೆ ಸುಪ್ರೀಂಕೋರ್ಟ್ ಅವಕಾಶ ನೀಡಿ ಕೆಲವು ನಿರ್ದೇಶನಗಳನ್ನು ಜಾರಿಗೊಳಿಸಿದ್ದಲ್ಲಿ ತನ್ನ ವಾದವನ್ನೂ ಆಲಿಸಲು ಅನುಮತಿ ಕೊಡಬೇಕು ಎಂದು ಮೋದಿ ಸರ್ಕಾರ ಇಂದು ಸರ್ವೋಚ್ಚ ನ್ಯಾಯಾಲಯಕ್ಕೆ ಕೇವಿಯೆಟ್ ಸಲ್ಲಿಸಿದೆ.

ಈ ಸಂಬಂಧ ಈಗಾಗಲೆ ವಕೀಲರೊಬ್ಬರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಆರ್.ದವೆ ನೇತೃತ್ವದ ತ್ರಿಸದಸ್ಯ ಪೀಠ, ಕೋರ್ಟ್ ರಿಜಿಸ್ಟ್ರಿಯಲ್ಲಿ ಅರ್ಜಿಗಳ ಸಂಖ್ಯೆ ಹೆಚ್ಚಾದರೆ ನ.15ರ ಮಂಗಳವಾರ ಈ ಕುರಿತ ವಿಚಾರಣೆಗಳನ್ನು ನಡೆಸಬಹುದಾಗಿದೆ ಎಂದು ತಿಳಿಸಿತು.  ಅಧಿಕ ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿರುವ ಕೇಂದ್ರ ಸರ್ಕಾರದ ಕ್ರಮದಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದೆ. ಈ ಹಿನ್ನೆಲೆಯಲ್ಲಿ ನಿಷೇಧವನ್ನು ರದ್ದುಗೊಳಿಸಬೇಕು ಹಾಗೂ ತಮ್ಮ ಅರ್ಜಿಯ ತ್ವರಿತ ವಿಚಾರಣೆ ನಡೆಸಬೇಕು ಎಂದು ವಕೀಲ ವಿವೇಕ್ ನಾರಾಯಣ ಶರ್ಮ ಪಿಐಎಲ್ ಸಲ್ಲಿಸಿದ್ದರು.

ಇದೇ ರೀತಿ ಮತ್ತೊಬ್ಬ ವಕೀಲ ಸಂಗಮ್ ಲಾಲ್ ಪಾಂಡೆ ಅವರೂ ಕೂಡ ಮತ್ತೊಂದು ಅರ್ಜಿ ಸಲ್ಲಿಸಿ ಮನವಿ ಮಾಡಿ ಮತ್ತಷ್ಟು ಸಮಯ ವಿಸ್ತರಿಸಲು ಕೇಂದ್ರಕ್ಕೆ ಸೂಚನೆ ನೀಡಬೇಕೆಂದು ಕೋರಿದ್ದರು. ಈ ಅರ್ಜಿಗಳ ಹಿನ್ನೆಲೆಯಲ್ಲಿ ತ್ರಿಸದಸ್ಯ ಪೀಠವು ನ.15ರಂದು ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದೆ.

► Follow us on –  Facebook / Twitter  / Google+

Facebook Comments

Sri Raghav

Admin