ಕೇಂದ್ರದ ತಂಡದ ಮುಂದೆ ರೈತರ ಅಳಲು
ಮದ್ದೂರು, ಅ.7- ಕಳೆದ ಬಾರಿ ಮಳೆಯಿಲ್ಲದೆ ಸಾಲಬಾಧೆಯಿಂದ 120ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಾರಿ ಬೆಳೆಗಳಿಗೆ ನೀರಿಲ್ಲ ರೈತರು ಆತ್ಮಹತ್ಯೆಯತ್ತ ಮುಖ ಮಾಡುತ್ತಿದ್ದಾರೆ. ಅಂತರ್ಜಲ ಕುಸಿದಿದೆ ಎಂದು ತಾಲ್ಲೂಕಿನ ಹೆಮ್ಮನಹಳ್ಳಿಗೆ ಭೇಟಿ ನೀಡಿದ ಕೇಂದ್ರದ ಝಾ ನೇತೃತ್ವದ ಜಲತಾಂತ್ರಿಕ ಸಮಿತಿಯ ಮುಂದೆ ರೈತರು ಅಳಲು ತೋಡಿಕೊಂಡ ಪರಿ ಇದಾಗಿತ್ತು.ಕಾವೇರಿಕೊಳ್ಳಗಳ ನೈಜ ಸ್ಥಿತಿ ಅಧ್ಯಯನ ಮಾಡಲು ಮಂಡ್ಯ ಜಿಲ್ಲೆಯ ವಿವಿಧ ಭಾಗಗಳಿಗೆ ಆಗಮಿಸಿದ ತಾಂತ್ರಿಕ ತಂಡದ ಅಧಿಕಾರಿಗಳ ಎದುರು ರೈತರು ತಮ್ಮ ಪರಿಸ್ಥಿತಿಯನ್ನು ವಿವರಿಸಿದರು.
ಗದ್ದೆಗಳು ಒಣಗಿವೆ. ಚಾನಲ್ಗಳಲ್ಲಿ ನೀರು ಬರುತ್ತಿಲ್ಲ. ಒಂದು ಬೆಳೆಯನ್ನೂ ಬೆಳೆಯಲಾಗುತ್ತಿಲ್ಲ. ನೀರಾವರಿ ಪ್ರದೇಶವಾದರೂ ನೀರು ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. 900 ಅಡಿ ಆಳಕ್ಕೆ ಬೋರ್ ಕೊರೆದರೂ ನೀರು ಬರುತ್ತಿಲ್ಲ. ಕೆರೆ-ಕಟ್ಟೆಗಳಲ್ಲೂ ಕೂಡ ನೀರಿಲ್ಲ. ನಿಗದಿ ಯಂತೆ ಮಳೆಯಾಗಿಲ್ಲ. ಜಾನುವಾರುಗಳಿಗೂ ಕೂಡ ನೀರು ಇಲ್ಲ ಎಂದು ರೈತರು ಅಧಿಕಾರಿಗಳ ಮುಂದೆ ತಮ್ಮ ಸಂಕಷ್ಟದ ಪರಿಸ್ಥಿತಿಯನ್ನು ವಿವರಿಸಿದರು.
► Follow us on – Facebook / Twitter / Google+