ಕೇಂದ್ರ ರಾಜ್ಯಕ್ಕೆ ನೀಡಿದ ಅನುದಾನ-ಖರ್ಚಿನ ಬಗ್ಗೆ ಶ್ವೇತಪತ್ರ ಹೊರಡಿಸಲು ಜೋಷಿ ಆಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

Prahlad-Joshi--1

ಹುಬ್ಬಳ್ಳಿ, ಮೇ 21- ಕಳೆದ ಮೂರು ವರ್ಷಗಳಿಂದ ರಾಜ್ಯಕ್ಕೆ ಪ್ರಧಾನಿ ಮೋದಿ ನೀಡಿದಷ್ಟು ಅನುದಾನ ಯಾರೂ ನೀಡಿಲ್ಲ. ರಾಜ್ಯಕ್ಕೆ ಸಂದಿರುವ ಅನುದಾನ ಹಾಗೂ ಮಾಡಿದ ಖರ್ಚಿನ ಬಗ್ಗೆ ಶ್ವೇತಪತ್ರ ಹೊರಡಿಸಲಿ ಎಂದು ಸಂಸದ ಪ್ರಹ್ಲಾದ್ ಜೋಷಿ ಆಗ್ರಹಿಸಿದ್ದಾರೆ.  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರ ಪರಿಹಾರಕ್ಕಾಗಿ ರಾಜ್ಯಕ್ಕೆ ಬರಬೇಕಾದ ಅನುದಾನವನ್ನು ಮೊದಲು ನೀಡಲಿ. ನಂತರ ಬಿಜೆಪಿಯವರು ಬರ ಪ್ರವಾಸ ಕೈಗೊಳ್ಳಲಿ ಎಂದು ಹೇಳಿಕೆ ನೀಡಿರುವ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿರುವ ಪ್ರಹ್ಲಾದ್ ಜೋಷಿ ಮೊದಲು ಕಂದಾಯ ಸಚಿವ ಕಾಗೋಡು ತಿಮ್ಮಪ್ಪನವರ ಹೇಳಿಕೆ ನೋಡಲಿ. ಅವರು ಕೇಂದ್ರದಿಂದ ಸಾಕಷ್ಟು ಹಣ ಬಂದಿದೆ. ಅದನ್ನು ಸರಿಯಾಗಿ ನೀಡಲು ಆಗುತ್ತಿಲ್ಲ ಎಂದು ಹೇಳಿದ್ದಾರೆ ಎಂದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸುಳ್ಳು ಹೇಳುವುದನ್ನು ಬಿಟ್ಟು ಏನೂ ಗೊತ್ತಿಲ್ಲ. ಕೇವಲ ಕೇಂದ್ರದವರ ಮೇಲೆ ತಮ್ಮ ವೈಫಲ್ಯ ಹಾಕುತ್ತಿದ್ದಾರೆ ಎಂದು ಹೇಳಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ದಲಿತರ ಮನೆಯಲ್ಲಿ ಊಟ ಮಾಡಿದ್ದಾರೆ. ಆ ಊಟ ಯಾರು ತಂದಿದ್ದಾರೆ, ಎಲ್ಲಿಂದ ಬಂದಿದೆ ಎಂಬುದು ಅವರಿಗೆ ಗೊತ್ತಿಲ್ಲ. ಇದನ್ನೇ ಇಟ್ಟುಕೊಂಡು ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ ಎಂದು ಕಿಡಿಕಾರಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಪಂ ಸಾಮಾನ್ಯ ಸಭೆಯಲ್ಲಿ ಜಿಪಂ ಕಾರ್ಯದರ್ಶಿ ವೈ.ಡಿ.ಕುನ್ನಿಬಾವಿ ಹಾಗೂ ಹುಬ್ಬಳ್ಳಿ ತಾಪಂ ಸಿಇಒ ರಾಮಚಂದ್ರ ಹೊಸಮನಿ ಹೊಡೆದಾಡಿಕೊಂಡಿರುವ ಕುರಿತಂತೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯ ಸರ್ಕಾರ ನಿದ್ರಾವಸ್ಥೆಯಲ್ಲಿದೆ. ಅಧಿಕಾರಿಗಳ ಮೇಲೆ ಸರ್ಕಾರದ ನಿಯಂತ್ರಣವಿಲ್ಲ ಎಂದು ಆರೋಪಿಸಿದರು.   ಜಿಲ್ಲಾ ಉಸ್ತುವಾರಿ ವಹಿಸಿರುವ ಸಚಿವ ವಿನಯ್ ಕುಲಕರ್ಣಿ ಅಸಮರ್ಥರು ಎಂದ ಅವರು, ಆಡಳಿತ ಯಂತ್ರ ಕುಸಿಯಲು ಸರ್ಕಾರದ ದುರಾಡಳಿತವೇ ಕಾರಣ. ಸಿದ್ದರಾಮಯ್ಯ ಕಾಂಗ್ರೆಸ್‍ನ ಕೊನೆಯ ಮುಖ್ಯಮಂತ್ರಿ. ಇವರ ಆಡಳಿತದಲ್ಲಿ ಏನೆಲ್ಲ ದುರಾಡಳಿತ ನಡೆಯಬಹುದೋ ಅವೆಲ್ಲಾ ನಡೆದಿವೆ ಎಂದು ಟೀಕಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin