ಕೇಂದ್ರ ಸಚಿವ ರಾಮ್‍ ವಿಲಾಸ್ ಪಾಸ್ವಾನ್ ಆರೋಗ್ಯ ಸ್ಥಿರ

ಈ ಸುದ್ದಿಯನ್ನು ಶೇರ್ ಮಾಡಿ

Ram-Vilas-Paswan-n

ಪಾಟ್ನಾ, ಜ.13-ಕೇಂದ್ರ ಸಚಿವ ಮತ್ತು ಎಲ್‍ಜೆಪಿ ಅಧ್ಯಕ್ಷ ರಾಮ್‍ವಿಲಾಸ್ ಪಾಸ್ವಾನ್ ಉಸಿರಾಟ ತೊಂದರೆಯಿಂದ ಇಲ್ಲಿನ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪಾಸ್ವಾನ್ ಆರೋಗ್ಯ ಸ್ಥಿರವಾಗಿದ್ದು ಯಾವುದೇ ಆತಂಕಪಡುವ ಅಗತ್ಯವಿಲ್ಲ, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಕಾರ್ಡಿಯೋಲಾಜಿ ವಿಭಾಗದ ಮುಖ್ಯ ವೈದ್ಯಾಧಿಕಾರಿ ಡಾ.ಪ್ರಮೋದ್ ಕುಮಾರ್ ತಿಳಿಸಿದ್ದಾರೆ.
70 ವರ್ಷದ ಪಾಸ್ವಾನ್‍ರನ್ನು ತೀವ್ರ ನಿಗಾ ಘಟಕದಲ್ಲಿರಿಸಲಾಗಿದ್ದು, ಹಲವು ಪರೀಕ್ಷೆಗಳನ್ನು ನಡೆಸಿದ್ದೇವೆ. ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿದೆ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ಮತ್ತೊಬ್ಬ ವೈದ್ಯರಾದ ಡಾ.ಸಂಜೀವ್‍ಕುಮಾರ್ ತಿಳಿಸಿದರು. ಪಾಸ್ವಾನ್ ಅವರ ಅನಾರೋಗ್ಯ ವಿಷಯ ತಿಳಿದ ಪಕ್ಷದ ಸಾವಿರಾರು ಕಾರ್ಯಕರ್ತರು ಆಸ್ಪತ್ರೆ ಬಳಿ ಜಮಾಯಿಸಿದ್ದು, ಪೊಲೀಸರು ಸೂಕ್ತ ಬಂದೋಬಸ್ತ್ ಒದಗಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android /

Facebook Comments

Sri Raghav

Admin