ಕೇಂದ್ರ ಸರ್ಕಾರಕ್ಕೆ 3 ವರ್ಷ : ಸಾಧನೆಗಳ ಪಟ್ಟಿಮಾಡಿದ ಪ್ರಧಾನಿ ಮೋದಿ

ಈ ಸುದ್ದಿಯನ್ನು ಶೇರ್ ಮಾಡಿ

Modi-3Yearsನವದೆಹಲಿ, ಮೇ 26-ತಮ್ಮ ಸರ್ಕಾರದ ಮೂರು ವರ್ಷಗಳ ಆಡಳಿತದಲ್ಲಿ ಕೈಗೊಳ್ಳಲಾದ ದಿಟ್ಟ ಕ್ರಮಗಳಿಂದ ಜನರ ಜೀವನದಲ್ಲಿ ಪರಿವರ್ತನೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಎನ್‍ಡಿಎ ಸರ್ಕಾರ ಮೂರು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿ ಇಂದಿಗೆ ಮೂರು ವರ್ಷ. ಈ ಸಂದರ್ಭದಲ್ಲಿ ಸರ್ಕಾರದ ಸಾಧನೆಗಳನ್ನು ಮೋದಿ ಪಟ್ಟಿ ಮಾಡಿದ್ದಾರೆ ಹಾಗೆಯೇ 2014 ಪ್ರಸ್ತುತ ಸನ್ನಿವೇಶದ ಹೋಲಿಕೆಗಳನ್ನು ತೋರಿಸಲು ವಿವಿಧ ವಲಯಗಳಿಗೆ ಸಂಬಂಧಪಟ್ಟ ಅಂಕಿ ಅಂಶಗಳನ್ನೂ ನೀಡಿದ್ದಾರೆ.ತಮ್ಮ ಸರ್ಕಾರದ ಸಾಧನೆಗಳ ಬಗ್ಗೆ ನರೇಂದ್ರ ಮೋದಿ ಆ್ಯಪ್ ಸಮೀಕ್ಷೆಯಲ್ಲಿ ಭಾಗವಹಿಸುವಂತೆ ಪ್ರಧಾನಿ ಮನವಿ ಮಾಡಿದ್ದಾರೆ. ಜೊತೆಗಿದ್ದೇವೆ, ವಿಶ್ವಾಸ ಇದೆ, ಆಗುತ್ತಿದೆ ವಿಕಾಸ ಎಂದು ಅವರು ಟ್ವೀಟ್‍ನಲ್ಲಿ ತಿಳಿಸಿದ್ದಾರೆ.   ಕೃಷಿ, ಮೊಬೈಲ್ ಬ್ಯಾಂಕಿಂಗ್, ದೂರ ಸಾಂದ್ರತೆ, ಮಹಿಳಾ ಸಬಲೀಕರಣ, ಮೇಕ್-ಇನ್-ಇಂಡಿಯಾ, ಪ್ರವಾಸೋದ್ಯಮ, ವಿದ್ಯುದೀಕರಣ, ಸೌರಶಕ್ತಿ, ಮತ್ತು ಎಲ್‍ಇಡಿ ಬಲ್ಬುಗಳ ವಿತರಣೆಯಂಥ ವಿವಿಧ ವಲಯಗಳಿಗೆ ಸಂಬಂಧಪಟ್ಟ ಗ್ರಾಫ್‍ನನ್ನು ಸಹ ಪ್ರಧಾನಿ ಪೋಸ್ಟ್ ಮಾಡಿದ್ದಾರೆ.

Modi--01

ವಿವಿಧ ಕ್ಷೇತ್ರಗಳ ಸಾಧನೆಗಳ ಸಮಗ್ರ ನೋಟ :

28 ಕೋಟಿಗೂ ಹೆಚ್ಚು ಜನ್-ಧನ್ ಖಾತೆಗಳನ್ನು ತೆರೆಯಲಾಗಿದೆ. 13 ಕೋಟಿಗೂ ಅಧಿಕ ಜನರನ್ನು ಸಾಮಾಜಿಕ ಭದ್ರತೆಯ ವ್ಯಾಪ್ತಿಗೆ ತರಲಾಗಿದೆ. 7.5 ಕೋಟಿ ಮಂದಿಗೆ ಮುದ್ರಾ ಸಾಲ ಸೌಲಭ್ಯಗಳು ದೊರೆಯುವಂತೆ ಮಾಡಿದೆ. ಪರಿಶಿಷ್ಟ ಜಾತಿಗಳು/ಪರಿಶಿಷ್ಟ ಪಂಗಡಗಳ ಉದ್ಯಮಿಗಳಿಗೆ ವಿಶೇಷ ಗಮನ ನೀಡಲಾಗಿದೆ ಎಂದು ಹೇಳಿದ್ದಾರೆ.

ಉಚಿತ ಎಲ್‍ಪಿಜಿ ಸಂಪರ್ಕಗಳನ್ನು ಕಲ್ಪಿಸುವ ಮೂಲಕ 2 ಕೋಟಿಗೂ ಅಧಿಕ ಬಡ ಕುಟುಂಬಗಳನ್ನು ಹೊಗೆ ಮುಕ್ತಗೊಳಿಸಲಾಗಿದೆ. ಬಡವರಿಗೆ ಕೈಗೆಟುಕುವ ದರದಲ್ಲಿ ವೈದ್ಯಕೀಯ ಚಿಕಿತ್ಸೆ ಮತ್ತು ಔಷಧಿಗಳು ಲಭ್ಯವಾಗುವಂತೆ ಮಾಡಲು ದಿಟ್ಟ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮೋದಿ ತಿಳಿಸಿದ್ಧಾರೆ
ಗುರಿ ಹೊಂದಲಾದ 18,456 ಗ್ರಾಮಗಳಲ್ಲಿ ಸುಮಾರು 13,500 ಹಳ್ಳಿಗಳನ್ನು ವಿದ್ಯುದೀಕರಣಗೊಳಿಸಲಾಗಿದೆ. ಕಳೆದ 3 ವರ್ಷಗಳಲ್ಲಿ 1 ಲಕ್ಷ 20 ಸಾವಿರ ಕಿ.ಮೀ. ರಸ್ತೆ ನಿರ್ಮಾಣದೊಂದಿಗೆ ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮೀಣಾಭಿವೃದ್ದಿ ಮತ್ತು ರಸ್ತೆ ನಿರ್ಮಾಣಕ್ಕಾಗಿ 3 ಪಟ್ಟು ಹೆಚ್ಚಳ ಕಂಡುಬಂದಿದೆ ಎಂದು ಸರ್ಕಾರದ ಗ್ರಾಫ್ ತಿಳಿಸುತ್ತದೆ.

 

2016ರಲ್ಲಿ, 273.38 ದಶಲಕ್ಷ ಮೆಟ್ರಿಕ್ ಟನ್ನುಗಳಷ್ಟು ದಾಖಲೆ ಪ್ರಮಾಣದ ಆಹಾರಧಾನ್ಯಗಳನ್ನು ಉತ್ಪಾದಿಸಲಾಗಿದೆ ಎಂದು ವಿವರಿಸಲಾಗಿದೆ. ರಾಷ್ಟ್ರೀಯ ಕೌಶಲ ಅಭಿವೃದ್ದಿ ನಿಗಮದಿಂದ 52.8 ಲಕ್ಷ ಯುವಕ-ಯುವತಿಯರಿಗೆ ತರಬೇತಿ ನೀಡಲಾಗಿದೆ. ಮುಂದಿನ ನಾಲ್ಕು ವರ್ಷಗಳಲ್ಲಿ ಪ್ರಧಾನಮಂತ್ರಿ ಕುಶಲ ವಿಕಾಸ ಯೋಜನೆ ಅಡಿ 1 ಕೋಟಿ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುವುದು. ನವೋದ್ಯಮಗಳಿಗಾಗಿ ಹೊಸ ನೀತಿಯನ್ನು ಅನುಷ್ಠಾನಗೊಳಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin