ಕೇಂದ್ರ ಸರ್ಕಾರದಿಂದ 34 ನ್ಯಾಯಮೂರ್ತಿಗಳ ಪಟ್ಟಿಗೆ ಅಂಗೀಕಾರ

ಈ ಸುದ್ದಿಯನ್ನು ಶೇರ್ ಮಾಡಿ

Supre-Court-Judgement
ನವದೆಹಲಿ, ನ.12- ಹೈಕೋರ್ಟ್ ನ್ಯಾಯಮೂರ್ತಿ ಗಳ ಹುದ್ದೆಗೆ ಸುಪ್ರೀಂಕೋರ್ಟ್ ಕೊಲಿಜಿಯಂ ಮಾಡಿದ್ದ ಶಿಫಾರಸ್ಸುಗಳಲ್ಲಿ 43 ಹೆಸರುಗಳನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ. ಉಳಿದ 34 ಹೆಸರುಗಳನ್ನು ಅಂಗೀಕರಿಸಿದೆ. ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಟಿ.ಎಸ್. ಥಾಕೂರ್ ನೇತೃತ್ವದ ಪೀಠಕ್ಕೆ ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ಈ ಮಾಹಿತಿ ನೀಡಿದ್ದಾರೆ. ಕೊಲಿಜಿಯಂ ಶಿಫಾರಸ್ಸು ಮಾಡಿದ್ದ 77 ಹೆಸರುಗಳಲ್ಲಿ 34 ಹೆಸರುಗಳನ್ನು ಕೇಂದ್ರ ಸರ್ಕಾರ ಅಂಗೀಕರಿಸಿದೆ. ಉಳಿದ 44 ಹೆಸರುಗಳನ್ನು ಮರು ಪರಿಶೀಲನೆಗಾಗಿ ವಾಪಸ್ ಕಳುಹಿಸಿಕೊಟ್ಟಿದ್ದೇವೆ. ಈಗ ನಮ್ಮ ಬಳಿ ನ್ಯಾಯಮೂರ್ತಿ ಗಳ ನೇಮಕಾತಿ ಕುರಿತ ಯಾವುದೇ ಕಡತಗಳು ಉಳಿದಿಲ್ಲ ಎಂದು ಅಟಾರ್ನಿ ಜನರಲ್ ಹೇಳಿದ್ದಾರೆ.

ಕಳೆದ ಬಾರಿ ವಿಚಾರಣೆ ವೇಳೆ ಕೆಂಡಾಮಂಡಲರಾಗಿದ್ದ ಸಿಜೆಐ ಥಾಕೂರ್ ಕೊಲಿಜಿಯಂ ಶಿಫಾರಸ್ಸು ಮಾಡಿದ್ದ ಕಡತಗಳ ಮೇಲೆ ಕೂತು ಕೇಂದ್ರ ಸರ್ಕಾರ ಕಾಲಹರಣ ಮಾಡುತ್ತಿದ್ದು, ನ್ಯಾಯಾಂಗದ ಸರ್ವನಾಶಕ್ಕೆ ಯತ್ನಿಸುತ್ತಿದೆ ಎಂದು ಚಾಟಿ ಬೀಸಿದ್ದರು. ಶಿಫಾರಸ್ಸುಗಳ ಕುರಿತ ಆಗಿರುವ ಬೆಳವಣಿಗೆಗಳ ಸಂಬಂಧ ವರದಿಗೆ ಸೂಚಿಸಿದ್ದರು. ಅಲ್ಲದೇ ನ್ಯಾಯಮೂರ್ತಿಗಳ ಕೊರತೆಯಿಂದ ಕರ್ನಾಟಕ ಹೈಕೋರ್ಟ್‍ನಲ್ಲಿ ಬಾಗಿಲು ಹಾಕಬೇಕಾದ ಪರಿಸ್ಥಿತಿ ಬಂದಿದೆ ಎಂದು ವಾಗ್ಬಾಣ ಪ್ರಯೋಗಿಸಿದ್ದರು.ಈ ನಡುವೆ ನ್ಯಾಯಮೂರ್ತಿಗಳ ನೇಮಕಾತಿ ಕುರಿತ ಪ್ರಕ್ರಿಯೆಗಳ ಜ್ಞಾಪನಾಪತ್ರ ಸಂಬಂಧ ಇದೇ ನ.15ರಂದು ಕೊಲಿಜಿಯಂ ಸಭೆ ಸೇರಲಿದೆ. ಮುಂದಿನ ವಿಚಾರಣೆಯನ್ನು ನ್ಯಾಯಾಲಯ ನ. 18ಕ್ಕೆ ಮುಂದೂಡಿದೆ.

 

► Follow us on –  Facebook / Twitter  / Google+

Facebook Comments

Sri Raghav

Admin