ಕೇಂದ್ರ ಸರ್ಕಾರಿ ನೌಕರರಿಗೊಂದು ಖುಷಿ ಸುದ್ದಿ
ನವದೆಹಲಿ, ಜೂ.11-ಏಳನೆ ವೇತನ ಆಯೋಗದ ಶಿಫಾರಸಿನಂತೆ ಕೇಂದ್ರ ಸರ್ಕಾರಿ ನೌಕರರು ಜುಲೈನಿಂದ ಪರಿಷ್ಕ್ರತ ಅಧಿಕ ಭತ್ಯೆ ಪಡೆಯಲಿದ್ದಾರೆ. ಮನೆ ಬಾಡಿಗೆ ಭತ್ಯೆ (ಎಚ್ಆರ್ಎ) ಸೇರಿದಂತೆ ಪರಿಷ್ಕ್ರತಭತ್ಯೆಗಳನ್ನು ಕೇಂದ್ರ ಸರ್ಕಾರ ಮುಂದಿನ ತಿಂಗಳಿನಿಂದ ವಿತರಿಸಲಿದ್ದು, 47 ಲಕ್ಷ ನೌಕರರು ಈ ಸೌಲಭ್ಯ ಪಡೆಯಲಿದ್ದಾರೆ. 7ನೆ ವೇತನ ಆಯೋಗದ ವರದಿ ಕುರಿತು ಎಚ್ಆರ್ಎ ಮತ್ತು ಅಧಿಕ ಭತ್ಯೆಗಳ ಹಂಚಿಕೆ ವಿಷಯಕ್ಕೆ ಸಂಬಂಧಿಸಿದಂತೆ ಈ ಸೋಮವಾರದ ನಂತರ ನಡೆಯುವ ಕೇಂದ್ರ ¸ಚಿವ ಸಂಪುಟದ ಮಹತ್ವದ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು.ನ
ಕೇಂದ್ರ ಸರ್ಕಾರಿ ನೌಕರರಿಗೆ ಭತ್ಯೆ ಹೆಚ್ಚಳಕ್ಕೆ ಸಂಬಂಧಿಸಿದಂತೆ ಕಾರ್ಯದರ್ಶಿಗಳ ಉನ್ನತಾಧಿಕಾರ ಸಮಿತಿ (ಇ-ಸಿಒಎಸ್) ನಿನ್ನೆ ತನ್ನ ಅಂತಿಮ ವರದಿಯನ್ನು ಸಂಪುಟಕ್ಕೆ ಸಲ್ಲಿಸಿದೆ. ಮನೆ ಬಾಡಿಗೆ ಭತ್ಯೆಯನ್ನು ಜನಸಂಖ್ಯೆ ಆಧಾರದ ಮೇಲೆ ವರ್ಗಿಕರಿಸಲಾದ ಎಕ್ಸ್, ವೈ, ಮತ್ತು ಝಡ್ ನಗರಗಳ ಮೂಲ ವೇತನದ ಆಧಾರದ ಮೇಲೆ ಅನುಕ್ರಮವಾಗಿ ಶೇ.24, ಶೇ.16 ಮತ್ತು ಶೇ.8ರಷ್ಟು ಹೆಚ್ಚಿಸಬೇಕೆಂದು ಎ.ಕೆ.ಮಾಥುರ್ ಸಮಿತಿ ಶಿಫಾರಸು ಮಾಡಿತ್ತು. ಇದಕ್ಕೆ ಇ-ಸಿಒಎಸ್ ಸಹ ಬೆಂಬಲ ನೀಡಿದೆ. ಈ ಎರಡೂ ಸಮಿತಿಗಳ ಶಿಫಾರಸು ಒಂದೇ ಆಗಿರುವುದರಿಂದ ಕೇಂದ್ರ ಸಂಪುಟ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಂಡು ಜುಲೈನಿಂದಲೇ ಪರಿಷ್ಕøತ ಭತ್ಯೆಗಳನ್ನು ನೀಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಅದರ ಪ್ರಕಾರವಾಗಿ ತುಟ್ಟಿ ಭತ್ಯೆ (ಡಿಎ) ಶೇ.50ರಷ್ಟು ದಾಟಿದಾಗ ಎಚ್ಆರ್ಎ ದರವು ಈ ಮೂರು ನಗರಗಳಲ್ಲಿ ಕ್ರಮವಾಗಿ ಶೇ.27, ಶೇ.18 ಮತ್ತು ಶೇ.9ರಷ್ಟು ಪರಿಷ್ಕರಣೆಯಾಗಲಿದೆ. ಅದೇ ರೀತಿ ಡಿಎ ಶೇ.100ರಷ್ಟು ದಾಟಿದರೆ ಅದು ಶೇ.30, ಶೇ.20 ಮತ್ತು ಶಏ.10ರಷ್ಟು ಏರಿಕೆಯಾಗಲಿದೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS