ಕೇಂದ್ರ ಸರ್ಕಾರ ನೌಕರರಿಗೆ ಶೇ.2ರಷ್ಟು ತುಟ್ಟಿಭತ್ಯೆ ಹೆಚ್ಚಳ

ಈ ಸುದ್ದಿಯನ್ನು ಶೇರ್ ಮಾಡಿ

Salary

ಹೊಸದಿಲ್ಲಿ ಅ.28 : ದೀಪಾವಳಿ ಗಿಫ್ಟ್ ಎಂಬಂತೆ ಕೇಂದ್ರ ಸರ್ಕಾರ ನೌಕರರ ತುಟ್ಟಿ ಭತ್ಯೆಯನ್ನು ಏರಿಕೆ ಮಾಡಿದೆ. ನೌಕರರಿಗೆ ಮತ್ತು ಪಿಂಚಣಿದಾರರರಿಗೆ ಶೇ.2ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಗುರುವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಇದು 2016ರ ಜುಲೈನಿಂದಲೇ ಅನ್ವಯಿಸಲಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ. ಈ ತುಟ್ಟಿ ಭತ್ಯೆ ಏರಿಕೆಯಿಂದ ಸರಕಾರಕ್ಕೆ ವಾರ್ಷಿಕ 5,622 ಕೋಟಿ ರೂ.ಹೊರೆಯಾಗಲಿದೆ. ಪ್ರಸಕ್ತ ವರ್ಷದಲ್ಲಿ (ಜುಲೈ-ಫೆಬ್ರವರಿ) 3,748 ಕೋಟಿ ರೂ. ಹೊರೆ ಬೀಳಲಿದೆ. ದೇಶದಲ್ಲಿ 50 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 58 ಲಕ್ಷದಷ್ಟು ಪಿಂಚಣಿದಾರರು ಇದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin