ಕೇಂದ್ರ ಸರ್ಕಾರ ರೈತ ವಿರೋಧಿ : ದತ್ತ

ಈ ಸುದ್ದಿಯನ್ನು ಶೇರ್ ಮಾಡಿ

y-s-v--datta

ಕಡೂರು, ಸೆ.19- ಕೊಬ್ಬರು, ತೆಂಗು, ಅಡಿಕೆ ಬೆಲೆ ಕುಸಿಯಲು ಕೇಂದ್ರದ ಬಿಜೆಪಿ ಸರ್ಕಾರದ ರೈತ ವಿರೋಧಿ ಧೋರಣೆಗಳೆ ಕಾರಣ ಎಂದು ಶಾಸಕ ವೈ.ಎಸ್.ವಿ.ದತ್ತ ಕೇಂದ್ರ ಸರ್ಕಾರದ ವಿರುದ್ದ ಕಿಡಿಕಾರಿದರುಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಬ್ಬರಿ ನಮ್ಮಲ್ಲಿಯೇ ಸಾಕಷ್ಟು ಇದ್ದರು ಹೊರ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿರುವುದರಿಂದ ನಮ್ಮ ರೈತರು ಕೊಬ್ಬರಿ ಬೆಲೆ ಕುಸಿಯಲು ಕಾರಣವಾಗಿದೆ. ಕೇಂದ್ರ ಸರ್ಕಾರವು ಹೊರದೇಶಗಳಿಂದ ತರಿಸುವ ಕೊಬ್ಬರಿಗೆ ಹಾಕುವ ಸುಂಕದ ಹಣದಲ್ಲಿ ನಮ್ಮ ರೈತರಿಗೆ ಬೆಂಬಲ ಬೆಲೆ ನೀಡಬಹುದಿತ್ತು ಎಂದು ವಾಗ್ದಾಳಿ ನಡೆಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಧಾನಿ ನರೇಂದ್ರ ಮೋದಿಯವರನ್ನು ಎರಡು ರಾಜ್ಯಗಳಲ್ಲಿ ಹೊತ್ತಿ ಉರಿಯುತ್ತಿರುವ ಕಾವೇರಿ ವಿಷಯದಲ್ಲಿ ಭೇಟಿ ಮಾಡಲು ಕಳೆದ ಐದು ದಿನಗಳಿಂದ ಅವಕಾಶ ಕೇಳುತ್ತಿದ್ದಾರೆ. ಆದರೆ ಪ್ರಧಾನಿಯವರಿಂದ ಯಾವುದೇ ಉತ್ತರ ಬರುತ್ತಿಲ್ಲ. ಇನ್ನು ಸಿದ್ದರಾಮಯ್ಯನವರು ಅಡಿಕೆ, ಕೊಬ್ಬರಿ, ತೆಂಗಿಗೆ ಬೆಂಬಲ ಬೆಲೆಯನ್ನು ನಿಗದಿಗೊಳಿಸಲು ಅವಕಾಶ ಕೇಳಿದರೆ ನೀಡುತ್ತಾರೆಯೇ ಎಂದು ವ್ಯಂಗ್ಯವಾಡಿದರು. ಕಳೆದ ಬಾರಿಯೂ ಸಹ ಬೆಂಬಲ ಬೆಲೆ ನಿಗಧಿ ಪಡಿಸಲು ತಿಪಟೂರಿನಿಂದ ಬೆಂಗಳೂರಿಗೆ ಹೊರಟ ರ್ಯಾಲಿಯನ್ನು ಸಿದ್ದರಾಮಯ್ಯನವರ ಆದೇಶದಂತೆ ಸಿದ್ದಗಂಗಾ ಮಠದ ಆವರಣದಲ್ಲಿ ತಡೆದು ಮಾತುಕತೆಯ ಮೂಲಕ ಬಗೆಹರಿಸಲು ನಿರ್ಧರಿಸಿ ರ್ಯಾಲಿ ಹಿಂಪಡೆಯಲಾಗಿತ್ತು. ನಂತರ ಮುಖ್ಯಮಂತ್ರಿಗಳು ರೈತ ಸಂಘಗಳ ಸಭೆ ನಡೆಯಿತು. ಯಾವುದೇ ಪರಿಹಾರ ಕಾಣಲು ಸಾಧ್ಯವಾಗಲಿಲ್ಲ.

 

 

ಆದರೆ ಸಮಸ್ಯೆ ಬಗೆಹರಿದಿಲ್ಲ. ಮತ್ತೆ ರ್ಯಾಲಿಯೂ ಕಡೂರಿನಿಂದ ಆರಂಭವಾಗಿ ಸೆ.21 ರಂದು ಬೆಂಗಳೂರು ಸೇರಲಿದೆ ಎಂದರು.
ಈಗಾಗಲೇ ನಾನು ಅರಸೀಕೆರೆ ಶಾಸಕರು ವಿಧಾನಸಭೆಯಲ್ಲಿ ಕೊಬ್ಬರಿ, ತೆಂಗಿಗೆ ಬೆಂಬಲ ಬೆಲೆ ನಿಗದಿ ಪಡಿಸಲು ಚರ್ಚಿಸಿದ್ದೇವೆ. ಇದು ರಾಜ್ಯ, ಕೇಂದ್ರದ ಸಮಸ್ಯೆಯಾಗಿದ್ದು , ಬೆಂಬಲ ಬೆಲೆಯನ್ನು ನಿಗದಿಗೊಳಿಸಿ ಕೇಂದ್ರ ಶೇ.50 ರಾಜ್ಯ ಶೇ.50 ಸಹಾಯ ಧನ ನೀಡಬೇಕಾಗುತ್ತದೆ ಎಂದು ತಿಳಿಸಿದರು. ಅಡಿಕೆ, ಕಾಫಿ, ರಬ್ಬರ್, ತಂಬಾಕಿಗೆ ಸಹಾಯ ಧನ ನೀಡುತ್ತಿತ್ತು.ಆದರೆ ಈಗ ಬಂದಿರುವ ಮಾಹಿತಿಯ ಪ್ರಕಾರ ಅಡಿಕೆ ವಿಷಕಾರಕ ಎಂಬ ನೆಪ ಒಡ್ಡಿ ಅಡಿಕೆ , ತಂಬಾಕಿಗೆ ಸಹಾಯಧನವನ್ನು ರದ್ದು ಪಡಿಸುವ ಹುನ್ನಾರ ನಡೆಯುತ್ತಿದೆ.

 

ಗೋರಕ್ ಸಿಂಗ್ ವರದಿ ಅಡಿಕೆ,ತಂಬಾಕು ಬೆಳೆಯುವ ರೈತರಿಗೆ ಮಾರಕವಾಗಲಿದೆ. ರಾಜ್ಯದ ಅಡಿಕೆ ಬೆಳೆಗಾರರ ಪರವಾಗಿ ನಿಲ್ಲಬೇಕು ಎಂದು ಆಗ್ರಹಿಸಿದರು. ರಾಜ್ಯ ಸರ್ಕಾರ ಬೆಂಬಲ ಬೆಲೆ ನೀಡುವುದಕ್ಕು ಮೊದಲು ಆವರ್ತ ನಿಧಿಯನ್ನು ಕಾದಿರಿಸಬೇಕಿತ್ತು, ಆದರೆ ಸಿದ್ದರಾಮಯ್ಯನವರ ಸರ್ಕಾರ ಆವರ್ತ ನಿಧಿಯನ್ನು ಇಟ್ಟಿದೆಯೊ ಇಲ್ಲವೂ ತಿಳಿಯುತ್ತಿಲ್ಲ ಎಂದು ಮುಖ್ಯಮಂತ್ರಿಗಳ ಆಡಳಿತ ವೈಪಲ್ಯವನ್ನು ಪ್ರಶ್ನಿಸಿದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಕೋಡಿಹಳ್ಳಿ ಮಹೇಶ್ವರಪ್ಪ, ಭಂಡಾರಿ ಶ್ರೀನಿವಾಸ್, ಪ್ರಶಾಂತ್, ಹರೀಶ್ ಮತ್ತಿತರರು ಇದ್ದರು.

 

► Follow us on –  Facebook / Twitter  / Google+

 

Facebook Comments

Sri Raghav

Admin