ಕೇಜ್ರಿವಾಲ್‍ಗೆ ಮಹಿಳಾ ಕಾರ್ಯಕರ್ತರ ಘೇರಾವ್

ಈ ಸುದ್ದಿಯನ್ನು ಶೇರ್ ಮಾಡಿ

Kejriwal

ನವದೆಹಲಿ, ಸೆ.8-ಲೈಂಗಿಕ ಹಗರಣಗಳಲ್ಲಿ ಅಮ್ ಆದ್ಮಿ ಪಕ್ಷದ ನಾಯಕರು ಷಾಮೀಲಾಗಿದ್ದಾರೆ ಎಂದು ಖಂಡಿಸಿ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತರು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‍ಗೆ ಮುತ್ತಿಗೆ ಹಾಕಿದ ಘಟನೆ ಇಂದು ಬೆಳಿಗ್ಗೆ ದೆಹಲಿ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಪಂಜಾಬ್ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಜೊತೆ ಚರ್ಚೆಗಾಗಿ ಲೂದಿಯಾನಗೆ ತೆರಳಲು ಕೇಜ್ರಿವಾಲ್ ರೈಲ್ವೆ ನಿಲ್ದಾಣಕ್ಕೆ ಬಂದಾಗ ಬಿಜೆಪಿ ಕಾರ್ಯಕರ್ತರು ಅವರಿಗೆ ಘೇರಾವ್ ಹಾಕಿ ಎಎಪಿ ನಾಯಕರ ವಿರುದ್ಧ ಘೋಷಣೆಗಳನ್ನು ಕೂಗಿದರು. ಮಹಿಳೆಯರನ್ನು ರಕ್ಷಿಸುವಲ್ಲಿ ಕೇಜ್ರಿವಾಲ್ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.

ಪಂಜಾಬ್ ಚುನಾವಣೆಯಲ್ಲಿ ಟಿಕೆಟ್‍ಗಳನ್ನು ನೀಡಲು ಎಎಪಿ ನಾಯಕರು ಮಹಿಳೆಯನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದ ಬೆನ್ನಲ್ಲೇ ಬಿಜೆಪಿ ಮಹಿಳಾ ಮೋರ್ಚಾ ಈ ಪ್ರತಿಭಟನೆ ನಡೆಸಿದೆ.

► Follow us on –  Facebook / Twitter  / Google+

Facebook Comments

Sri Raghav

Admin