ಕೇಜ್ರಿವಾಲ್‍ರಿಂದ ಕೋಟ್ಯಂತರ ರೂ. ಹವಾಲ ದಂಧೆ : ಕಪಿಲ್ ಮಿಶ್ರಾ ಗಂಭೀರ ಆರೋಪ

ಈ ಸುದ್ದಿಯನ್ನು ಶೇರ್ ಮಾಡಿ

Kapil-Mishra--01

ನವದೆಹಲಿ,ಮೇ 14-ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೋಟ್ಯಂತರ ರೂ.ಗಳ ಕಪ್ಪು ಮತ್ತು ಬಿಳಿ ಹಣ ದಂಧೆ ನಡೆಸಿದ್ದಾರೆ ಎಂದು ಆರೋಪಿಸಿರುವ ಉಚ್ಛಾಟಿತ ಸಚಿವ ಕಪಿಲ್ ಮಿಶ್ರಾ ಹವಾಲ ಮೂಲಕ ಪಾರ್ಟಿ ಫಂಡ್ ಸಂಗ್ರಹಿಸಿದ್ದಾರೆ ಎಂದು ಗಂಭೀರವಾಗಿ ಆಪಾದನೆ ಮಾಡಿದ್ದಾರೆ. ದೆಹಲಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಆಮ್ ಆದ್ಮಿ ಪಕ್ಷದ ಪರಮೋಚ್ಛ ನಾಯಕರ ವಿರುದ್ಧ ಮತ್ತೊಂದು ಸುತ್ತಿನ ವಾಗ್ದಾಳಿ ನಡೆಸಿದ ಕಪಿಲ್ ಮಿಶ್ರಾ, ತಾವು ಮಾಡುತ್ತಿರುವ ಆರೋಪಗಳಿಗೆ ಸಾಕ್ಷಾಧಾರಗಳನ್ನು ಒದಗಿಸುವ ದಾಖಲೆ ಪತ್ರ ಮತ್ತು ಪುರಾವೆಗಳನ್ನು ಒದಗಿಸಿದರು.ಹವಾಲಾ ದಂಧೆ ಮೂಲಕ ಕ್ರೇಜಿವಾಲ್ ಪಾರ್ಟಿ ಫಂಡ್ ಸಂಗ್ರಹಿಸಿದ್ದಾರೆ. ನಕಲಿ ಕಂಪನಿಗಳಿಂದ ಲಕ್ಷ ಲಕ್ಷ ಮೊತ್ತವನ್ನು ಕ್ರೋಢೀಕರಿಸಿದ್ದಾರೆ. ಈ ಮೂಲಕ ದೇಶಕ್ಕೆ ವಂಚನೆ ಮಾಡಿದ್ದಾರೆ ಎಂದು ಆಪಾದಿಸಿದರು.   ನಕಲಿ ಕಂಪನಿಗಳ ಮೂಲಕ ಕಳೆದ ಮೂರು ವರ್ಷಗಳಿಂದ ಹಣ ಸಂಗ್ರಹಿಸಿ ಬ್ಲಾಕ್ ಅಂಡ್ ವೈಟ್ ದಂಧೆಯಲ್ಲಿ ತೊಡಗಿದ್ದಾರೆ. 36 ಕೋಟಿ ರೂ.ಗಳ ಅಕ್ರಮ ಮೊತ್ತದ ಬಗ್ಗೆ ಆಯೋಗಕ್ಕೆ ಯಾವುದೇ ಮಾಹಿತಿ ಲಭ್ಯವಾಗದಂತೆ ವ್ಯವಸ್ಥಿತ ಪಿತೂರಿ ನಡೆಸುತ್ತಿದ್ದಾರೆ. ಇದಕ್ಕಾಗಿ ಹವಾಲ ಮೂಲಕ ಭಾರೀ ಮೊತ್ತವನ್ನು ಸಂಗ್ರಹಿಸಿದ್ದಾರೆ ಎಂದು ಮಿಶ್ರಾ ದೂರಿದರು.

461 ನಕಲಿ ಕಂಪನಿಗಳ ಹೆಸರಿನಲ್ಲಿ ಈ ಅಕ್ರಮ ಅವ್ಯವಹಾರಗಳು ನಡೆದಿವೆ. ಪಾರ್ಟಿ ಫಂಡ್ ಹೆಸರಿನಲ್ಲಿ ದಿನಾಂಕ ಮತ್ತು ಮೊತ್ತ ನಮೂದಿಸದ ಚೆಕ್‍ಗಳನ್ನು ಸ್ವೀಕರಿಸಲಾಗಿದೆ ಎಂದು ಕೆಲವು ಚೆಕ್‍ಗಳನ್ನು ಮಾಧ್ಯಮ ಪ್ರತಿನಿಧಿಗಳಿಗೆ ಪ್ರದರ್ಶಿಸಿದರು.   ನಕಲಿ ಕಂಪನಿಗಳಿಂದ ಚೆಕ್ ಮೂಲಕ ದೇಣಿಗೆ ಸಂಗ್ರಹಿಸಲಾಗಿದೆ. ಇವುಗಳಲ್ಲಿ ಬಹುತೇಕ ಬ್ಯಾಂಕ್ ಚೆಕ್‍ಗಳಾಗಿವೆ. ಈ ಎಲ್ಲಾ ಚೆಕ್‍ಗಳು ಅಕ್ಸೀಸ್ ಬ್ಯಾಂಕ್‍ಗಳ ಚೆಕ್‍ಗಳಾಗಿವೆ ಎಂದು ಅವರು ಹೇಳಿದರು.   ಕ್ರೇಜಿವಾಲ್‍ಗೆ ಸ್ವಲ್ಪವಾದರೂ ನಾಚಿಕೆ ಇದ್ದರೆ ಈ ಕೂಡಲೇ ಅವರು ರಾಜೀನಾಮೆ ನೀಡಬೇಕು, ದೇಶಕ್ಕೆ ಅವರು ಮಾಡಿರುವ ಮಹಾ ಮೋಸ ಬಯಲಾಗಿದೆ. ಮುಖ್ಯಮಂತ್ರಿಯನ್ನು ತಿಹಾರ್ ಜೈಲಿಗೆ ಅಟ್ಟಬೇಕು ಎಂದು ಮಿಶ್ರ ಆಗ್ರಹಿಸಿದರು.

ವಿದೇಶಿ ಪ್ರವಾಸ ಕೈಗೊಂಡ ಪಕ್ಷದ ಮಂತ್ರಿಗಳು ಮತ್ತು ಶಾಸಕರ, ಮುಖಂಡರ ಹಣ ದುರ್ವಿನಿಯೋಗದ ಬಗ್ಗೆ ನನ್ನ ಬಳಿ ಸಂಪೂರ್ಣ ಮಾಹಿತಿ ಇದೆ. ಈ ಎಲ್ಲ ಅಂಶಗಳು ಮತ್ತು ದಾಖಲೆ ಪತ್ರಗಳನ್ನು ನಾಳೆ ಬೆಳಗ್ಗೆ 11 ಗಂಟೆಗೆ ಸಿಬಿಐಗೆ ಒಪ್ಪಿಸುವುದಾಗಿ ಮಿಶ್ರಾ ಹೇಳಿದರು.

ಕುಸಿದು ಬಿದ್ದ ಮಿಶ್ರಾ:

ತಮ್ಮ ಆರೋಪವನ್ನು ಸಾಬೀತು ಮಾಡಲು ದಾಖಲೆಗಳನ್ನು ಪ್ರದರ್ಶಿಸುತ್ತಿದ್ದ ವೇಳೆ ಕಪಿಲ್ ಮಿಶ್ರಾ ಹಠಾತ್ ಕುಸಿದು ಬಿದ್ದರು. ತಕ್ಷಣ ಅವರನ್ನು ಅ್ಯಂಬುಲೆನ್ಸ್‍ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.   ವಿದೇಶಿ ಪ್ರವಾಸ ಕೈಗೊಳ್ಳಲು ಪಕ್ಷದ ಮುಖಂಡರು ಮತ್ತು ಸಚಿವರಿಗೆ ಹಣ ಎಲ್ಲಿಂದ ಬಂತು ಎಂಬ ಬಗ್ಗೆ ಸೂಕ್ತ ಮಾಹಿತಿ ಒದಗಿಸುವಂತೆ ಕೇಜ್ರಿವಾಲ್‍ರನ್ನು ಆಗ್ರಹಿಸಿ ಕಳೆದ 4 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಅವರು ತೀವ್ರ ಬಳಲಿಕೆಯಿಂದ ಇಂದು ಸುದ್ದಿಗೋಷ್ಟಿಯಲ್ಲಿ ಕುಸಿದು ಬಿದ್ದರು. ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin