ಕೇಜ್ರಿವಾಲ್ ವಿರುದ್ಧ ಮತ್ತೆ 10 ಕೋಟಿ ಮಾನಹಾನಿ ದಾವೆ ಹೂಡಿದ ಜೇಟ್ಲಿ ..!

ಈ ಸುದ್ದಿಯನ್ನು ಶೇರ್ ಮಾಡಿ

Kejriwal--01

ನವದೆಹಲಿ, ಮೇ 22-ನ್ಯಾಯಾಲಯದಲ್ಲಿ ಕಳೆದ ವಾರ ತಮ್ಮ ವಿರುದ್ಧ ಆಕ್ಷೇಪಾರ್ಹ ಪದ ಬಳಸಿದ್ದಕ್ಕಾಗಿ ಕೇಂದ್ರ ಹಣಕಾಸು ಮತ್ತು ರಕ್ಷಣಾ ಸಚಿವ ಅರುಣ್ ಜೇಟ್ಲಿ ಇಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮೇಲೆ 10 ಕೋಟಿ ರೂ.ಗಳ ಹೊಸದಾಗಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.ಕೇಜ್ರಿವಾಲ್ ವಿರುದ್ಧ ಈ ಹಿಂದೆ ಹೂಡಲಾಗಿದ್ದ ಮಾನಹಾನಿ ಪ್ರಕರಣದ ವಿಚಾರಣೆ ವೇಳೆ ಅವರ ಪರ ವಕೀಲ ರಾಮ್ ಜೇಠ್ಮಾಲನಿ ಮೇ 15 ಮತ್ತು ಮೇ 17ರಂದು ಪಾಟಿ ಸವಾಲಿನ ಸಂದರ್ಭದಲ್ಲಿ ತಮ್ಮ ವಿರುದ್ಧ ಅವಹೇಳನಕಾರಿ ಪದ ಬಳಸಿದರು ಎಂದು ಜೇಟ್ಲಿ ಆರೋಪಿಸಿದ್ದಾರೆ. ಈ ಸಂಬಂಧ ಇಂದು ಜೇಟ್ಲಿ ಪರ ವಕೀಲ ಮಾಣಿಕ್ ಡೋಗ್ರಾ, ಕೇಜ್ರಿವಾಲ್ ವಿರುದ್ಧ 10 ಕೋಟಿ ರೂ.ಗಳ ಮಾನಹಾನಿಗೆ ದಾವೆ ಹೂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin