ಕೇನ್ಸ್ ಚಲನಚಿತ್ರೋತ್ಸವಕ್ಕೆ ದೀಪಿಕಾ ಮೆರುಗು

ಈ ಸುದ್ದಿಯನ್ನು ಶೇರ್ ಮಾಡಿ

deepika-padkone

ಬಾಲಿವುಡ್ ಬ್ಯೂಟಿ ದೀಪಿಕಾ ಪಡುಕೋಣೆ ಯಾನೆ ಡಿಪಿ ಅಂತಾರಾಷ್ಟ್ರೀಯ ಮಟ್ದದಲ್ಲೂ ದಿನದಿಂದ ದಿನಕ್ಕೆ ಲೋಕಪ್ರಿಯಳಾಗುತ್ತಿದ್ದಾಳೆ. xXx: Return of Xander Cage ಸಿನಿಮಾ ಮೂಲಕ ಹಾಲಿವುಡ್ ಖ್ಯಾತನಾಮರ ಹುಬ್ಬೇರುವಂತೆ ಮಾಡಿರುವ ಡಿಪಿ ಹಲವಾರು ಅಂತಾರಾಷ್ಟ್ರೀಯ ನಿಯತಕಾಲಿಕ ಪತ್ರಿಕೆಗಳ ಮುಖಪುಟದಲ್ಲೂ ರಾರಾಜಿಸಿದ್ದಾಳೆ. ಅಲ್ಲದೆ, ಗೋಲ್ಡನ್ ಗ್ಲೋಬ್ 2017 ಮತ್ತು ಆಸ್ಕರ್ 2017ರ ಪ್ರಶಸ್ತಿ ಪ್ರದಾನ ಸಮಾರಂಭಗಳಲ್ಲೂ ಮಿಂಚಿದ್ದಾಳೆ. ನೀಳಕಾಯದ ಈ ಬೆಡಗಿ ಇಂಟರ್‍ನ್ಯಾಷನಲ್ ಕಾಸ್ಮೆಟಿಕ್ ಬ್ರಾಂಡ್‍ಗಳ ಪ್ರಚಾರ ರಾಯಭಾರಿಯೂ ಹೌದು. ಐಶ್ವರ್ಯ ರೈ ಬಚ್ಚನ್ ಮತ್ತು ಸೋನಂ ಕಪೂರ್ ಅವರಂತೆ ಬ್ಯೂಟಿ ಬ್ರಾಂಡ್ ಭಾರತದ ಚಿರಪರಿಚಿತ ಸೆಲೆಬ್ರಿಟಿಯಾಗಿದ್ದಾಳೆ.

ಈಗ ಬಂದಿರುವ ಹೊಸ ಸುದ್ದಿ ಎಂದರೆ, 2017ರ ಕೇನ್ಸ್ ಚಲನಚಿತ್ರೋತ್ಸವ ಸಮಾರಂಭದಲ್ಲೂ ವಿಶೇಷ ಅತಿಥಿಯಾಗಿ ಭಾಗವಹಿಸುವಂತೆ ದೀಪಿಕಾಗೆ ರೆಡ್‍ಕಾರ್ಪೆಟ್ ಸ್ವಾಗತ ನೀಡಲಾಗಿದೆ. ಫೋಟೋಜೆನಿಕ್ ಫೇಸ್ ಹೊಂದಿರುವ ಡಿಪಿ ಛಾಯಾಗ್ರಾಹಕರ ಕ್ಯಾಮೆರಾಗಳಿಗೆ ಒಳ್ಳೆಯ ಆಹಾರ ಎಂಬುದರಲ್ಲಿ ಎರಡು ಮಾತಿಲ್ಲ.ಮಾದಕತೆ, ಸ್ಟೈಲ್ ಮತ್ತು ಆಕರ್ಷಕ ನಗುವಿನ ಒಡತಿಯಾಗಿರುವ ದೀಪಿಕಾ ಇರುವೆಡೆ ಗ್ಲಾಮರ್‍ಗೆ ಬರವಿಲ್ಲ. ಹೀಗಾಗಿ ಈಕೆ ಕೇನ್ಸ್ಚ ಲನಚಿತ್ರೋತ್ಸವದಲ್ಲಿ ಅನಿವಾರ್ಯ ವಿಶೇಷ ಅತಿಥಿಯಾಗಲಿದ್ದಾಳೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin