ಕೇರಳದಲ್ಲಿ ಮತ್ತೆ ಭುಗಿಲೆದ್ದ ಘರ್ಷಣೆ : ಮೂವರು ಆರ್‍ಎಸ್‍ಎಸ್ ಕಾರ್ಯಕರ್ತರ ಮೇಲೆ ಹಲ್ಲೆ

ಈ ಸುದ್ದಿಯನ್ನು ಶೇರ್ ಮಾಡಿ

RSS-Attack

ಕಲ್ಲಿಕೋಟೆ, ಮಾ.5- ಕೇರಳದಲ್ಲಿ ಸಿಪಿಎಂ ಮತ್ತು ಆರ್‍ಎಸ್‍ಎಸ್ ನಡುವಣ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ. ಕಲ್ಲಿಕೋಟೆಯಲ್ಲಿ ನಿನ್ನೆ ತಡರಾತ್ರಿ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ ದುಷ್ಕರ್ಮಿಗಳ ಗುಂಪೊಂದು  ಆರ್‍ಎಸ್‍ಎಸ್‍ನ ಮೂವರು ಕಾರ್ಯಕರ್ತರನ್ನು ತೀವ್ರ ಗಾಯಗೊಳಿಸಿದೆ.  ಗಾಯಗೊಂಡ ಕಾರ್ಯಕರ್ತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕೃತ್ಯದ ಹಿಂದೆ ಆಡಳಿತಾರೂಢ ಸಿಪಿಎಂ ಕಾರ್ಯಕರ್ತರ ಕೈವಾಡವಿದೆ ಎಂದು ಶಂಕಿಸಲಾಗಿದ್ದು, ತನಿಖೆ ಮುಂದುವರಿದಿದೆ.   ಕಳೆದ ಎರಡು ದಿನಗಳ ಹಿಂದೆ ಸಿಪಿಎಂನ ಯುವ ಘಟಕ ಡೆಮಾಕ್ರಟಿಕ್ ಯೂತ್‍ಫ್ರಂಟ್ ಆಫ್ ಇಂಡಿಯಾ (ಡಿವೈಎಫ್‍ಐ)ದ ಇಬ್ಬರು ಕಾರ್ಯಕರ್ತರ ಮೇಲೆ ಪಾಲಕ್ಕಾಡ್ ಜಿಲ್ಲೆಯ ಇಲುಪುಳಿಯಲ್ಲಿ ಭೀಕರ ಹಲ್ಲೆ ನಡೆದಿತ್ತು. ಬಿಜೆಪಿ ಕಾರ್ಯಕರ್ತರೇ ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿತ್ತು.

ಡಿವೈಎಫ್‍ಐ ಕಾರ್ಯಕರ್ತರಾದ ರತೀಫ್, ಯೂಸುಫ್ ಮತ್ತು ಸುದೇಶ್ ಎಂಬುವರ ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿತ್ತು. ಕಳೆದ ಒಂದು ವಾರದಿಂದ ಸಿಪಿಎಂ ಮತ್ತು ಆರ್‍ಎಸ್‍ಎಸ್ ಕಾರ್ಯಕರ್ತರ ನಡುವೆ ಘರ್ಷಣೆ ಭುಗಿಲೆದ್ದಿದ್ದು, ಎರಡೂ ಬಣಗಳ ಕಚೇರಿಗಳು ಬೆಂಕಿಗಾಹುತಿಯಾಗಿ ಕೆಲವರು ಗಾಯಗೊಂಡಿದ್ದರು.  ಪಾಲಕ್ಕಾಡ್ ಮತ್ತು ಕಲ್ಲಿಕೋಟೆಯಲ್ಲಿ ಬೂದಿ ಮುಚ್ಚಿದ ಕೆಂಡದ ವಾತಾವರಣವಿದ್ದು, ಘರ್ಷಣೆಗಳು ಮರುಕಳಿಸದಂತೆ ವ್ಯಾಪಕ ಬಂದೋಬಸ್ತ್ ಮಾಡಲಾಗಿದೆ.

Facebook Comments

Sri Raghav

Admin