ಕೇರಳದಿಂದ ಸಾಗರಕ್ಕೆ ಬಂದ ನಿಫಾ ವೈರಸ್ ಸೋಂಕಿತ ಯುವಕ..?

ಈ ಸುದ್ದಿಯನ್ನು ಶೇರ್ ಮಾಡಿ

Nipah-virus
ಶಿವಮೊಗ್ಗ, ಮೇ 24- ಜ್ವರದಿಂದ ಬಳಲುತ್ತದ್ದ ಯುವಕನಿಗೆ ನಿಫಾ ವೈರಸ್ ಸೋಂಕು ತಗುಲಿರುವ ಶಂಕೆ ಹಿನ್ನೆಲೆಯಲ್ಲಿ ಆತನ ರಕ್ತದ ಮಾದರಿಯನ್ನು ಪರೀಕ್ಷೆಗಾಗಿ ಮಹಾರಾಷ್ಟ್ರಕ್ಕೆ ಕಳುಹಿಸಲಾಗಿದೆ ಎಂದು ಸಾಗರ ವೈದ್ಯಾಧಿಕಾರಿ ಡಾ.ಪ್ರಕಾಶ್ ಬೋಸ್ಲೆ ತಿಳಿಸಿದ್ದಾರೆ. ಕೇರಳದಿಂದ ಸಾಗರಕ್ಕೆ ಹಿಂದಿರುಗಿದ ಯುವಕನೊಬ್ಬ ಕಳೆದ ಎರಡು ದಿನಗಳಿಂದ ಜ್ವರದಿಂದ ಬಳಲುತ್ತಿದ್ದು, ನಿಫಾ ವೈರಸ್‍ನ ಸೋಂಕು ತಗುಲಿರುವ ಆಂತಕದಿಂದ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.  ಯುವಕನಿಗೆ ಈ ವೈರಸ್ ತಗುಲಿರಬಹುದೆಂಬ ಶಂಕೆಯಿಂದ ಮುನ್ನೆಚ್ಚರಿಕೆಯಿಂದ ಆತನ ರಕ್ತದ ಮಾದರಿಯನ್ನು ಮಹಾರಾಷ್ಟ್ರದ ಪುಣೆ ಲ್ಯಾಬ್‍ಗೆ ಕಳುಹಿಸಲಾಗಿದೆ. ಲ್ಯಾಬ್‍ನಿಂದ ವರದಿ ಬಂದ ನಂತರ ಏನೆಂಬುದು ತಿಳಿಯಲಿದ್ದು, ಅಲ್ಲಿಯವರೆಗೂ ಆಸ್ಪತ್ರೆಗೆ ದಾಖಲಾಗುವಂತೆ ಯುವಕನಿಗೆ ಹೇಳಲಾಗಿದೆ ಎಂದು ಬೋಸ್ಲೆ ಹೇಳಿದ್ದಾರೆ.

Facebook Comments

Sri Raghav

Admin