ಕೇರಳದ ಕಣ್ಣೂರಿನ ಬಿಜೆಪಿ ಕಚೇರಿ ಮೇಲೆ ನಾಡಬಾಂಬ್ ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

Keral--01

ಕಣ್ಣೂರು(ಕೇರಳ), ಅ.11-ಸಿಪಿಐ-ಎಂ ಮತ್ತು ಬಿಜೆಪಿ ಕಾರ್ಯಕರ್ತರ ರಣರಂಗವಾಗಿ ಮಾರ್ಪಟ್ಟಿರುವ ಕೇರಳದ ಕಣ್ಣೂರಿನಲ್ಲಿ ಮತ್ತೆ  ನಾಡ ಬಾಂಬ್ ದಾಳಿ ನಡೆದಿದೆ. ಸ್ಥಳೀಯ ಬಿಜೆಪಿ ಕಚೇರಿಯಲ್ಲಿ ನಿನ್ನೆ ರಾತ್ರಿ ನಾಡಬಾಂಬ್ ಸ್ಟೋಟಗೊಂಡು ಕಿಟಕಿ ಗಾಜುಗಳು ಪುಡಿ ಪುಡಿಯಾಗಿದ್ದು, ಪೀಠೋಪಕರಣಗಳಿಗೆ ಹಾನಿ ಉಂಟಾಗಿದೆ. ಕಚೇರಿಯಲ್ಲಿ ಇದ್ದ ನಾಡಬಾಂಬ್ ಸ್ಫೋಟಗೊಂಡು ಈ ಘಟನೆ ಸಂಭವಿಸಿದೆ ಎಂದು ಒಂದು ಮೂಲಗಳು ಹೇಳಿದ್ದರೆ, ಇದು ಸಿಪಿಐ-ಎಂ ಕೃತ್ಯವೆಂದು ಬಿಜೆಪಿ ಆರೋಪಿಸಿದೆ.  ಬಿಜೆಪಿ ಕಚೇರಿ ಮೇಲೆ ನಿನ್ನೆ ದಾಳಿ ಮಾಡಿದ ಪೊಲೀಸರು ಖಡ್ಗಗಳು, ಲಾಂಗ್, ಮಚ್ಚು ಹಾಗೂ ಸ್ಟೀಲ್ ಬಾಂಬ್‍ಗಳನ್ನು (ನಾಡಬಾಂಬ್) ವಶಪಡಿಸಿಕೊಂಡಿದ್ದರು.

Facebook Comments

Sri Raghav

Admin