ಕೇರಳದ ಗಾಜಾಸ್ಟ್ರೀಟ್ ಮೇಲೆ ಎನ್‍ಐಎ ನಿಗಾ

ಈ ಸುದ್ದಿಯನ್ನು ಶೇರ್ ಮಾಡಿ

NIA

ತಿರುವನಂತಪುರಂ ಜೂ.19- ಕೇರಳದ ಕಾಸರಗೋಡಿನ ಥುರುತಿ ವಾರ್ಡ್‍ನಲ್ಲಿ ಇತ್ತೀಚೆಗೆ ನಾಮಕರಣಗೊಂಡಿರುವ ಗಾಜಾ ಸ್ಟ್ರೀಟ್ (ಇಸ್ರೇಲ್-ಪ್ಯಾಲೇಸ್ತೀನ್ ಸಂಘರ್ಷಕ್ಕೆ ಕಾರಣವಾದ ಸ್ಥಳ) ಮೇಲೆ ಗುಪ್ತ (ಐಬಿ) ಮತ್ತು ರಾಷ್ಟ್ರೀಯ ತನಿಖಾ ದಳ (ಎನ್‍ಐಎ) ಕಣ್ಣಿಟ್ಟಿವೆ.   ಗಾಜಾ ಸ್ಟ್ರಿಪ್ ಎಂಬುದು ಪ್ಯಾಲೇಸ್ತೀನ್ ಆಡಳಿತಕ್ಕೆ ಒಳಪಟ್ಟಿದ್ದು, ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಸಂಘಟನೆಯ ಚಟುವಟಿಕೆಯ ಕೇಂದ್ರವಾಗಿದೆ.

ಈ ವಿವಾದ ಸ್ಥಳದ ಹೆಸರನ್ನು ಹೋಲುವಂತೆ ಥುರುತಿ ವಾರ್ಡ್‍ನಲ್ಲಿ ಮಸೀದಿಯೊಂದಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಗಾಜಾ ಸ್ಟ್ರೀಟ್ ಎಂದು ನಾಮಕರಣ ಮಾಡುವ ಬಗ್ಗೆ ಚರ್ಚೆಗಳು ಗ್ರಾಸವಾಗಿರುವಾಗಲೇ ಐಬಿ ಮತ್ತು ಎನ್‍ಐಎ ಈ ಬೀದಿ ಮೇಲೆ ಮತ್ತು ಅಲ್ಲಿ ನಡೆಯುವ ಚಟುವಟಿಕೆಗಳ ಮೇಲೆ ಕಣ್ಣಿಟ್ಟಿದೆ. ಕೇರಳದಲ್ಲಿ ಕಳೆದ ವರ್ಷದಿಂದ 20ಕ್ಕೂ ಹೆಚ್ಚು ಯುವಕರು ನಾಪತ್ತೆಯಾಗಿದ್ದು ಐಎಸ್ ಭಯೋತ್ಪಾದನೆ ಸಂಘಟನೆಗೆ ಸೇರಿರುವ ಶಂಖೆ ಇದೆ. ಈ ಹಿನ್ನೆಲೆಯಲ್ಲಿ ಗಾಜಾ ಸ್ಟ್ರೀಟ್ ಬಗ್ಗೆ ನಿಗಾ ಇಡಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin