ಕೇರಳದ ಚಿತ್ರನಟಿ ರೇಖಾ ಮೋಹನ್ ನಿಗೂಢ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

rekhan-mohanತ್ರಿಶೂರ್,ನ.13- ಚೆನ್ನೈನಲ್ಲಿ ಕಿರುನಟಿ ಸುಪರ್ಣ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೆ ಕೇರಳದ ಚಿತ್ರನಟಿ ಮತ್ತು ಟೆಲಿವಿಷನ್ ತಾರೆ ರೇಖಾ ಮೋಹನ್ ತಮ್ಮ ಅಪಾರ್ಟ್‍ಮೆಂಟ್‍ನಲ್ಲಿ ನಿಗೂಢವಾಗಿ ಸಾವಿಗೀಡಾಗಿದ್ದು, ಹಲವಾರು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ.
ತ್ರಿಶೂರ್‍ನ ಐಷಾರಾಮಿ ಶೋಭಾಸಿಟಿ ಕಾಂಪ್ಲೆಕ್ಸ್ ಅಪಾರ್ಟ್‍ಮೆಂಟ್‍ನಲ್ಲಿ 45 ವರ್ಷದ ನಟಿಯ ಶವ ಪತ್ತೆಯಾಗಿದ್ದು, ಉದ್ಯಮಿಯಾಗಿರುವ ಈಕೆಯ ಪತಿ ಮಲೇಷ್ಯಾಗೆ ತೆರಳಿದ ನಂತರ ಈಕೆ ಅಪಾರ್ಟ್‍ಮೆಂಟ್ ಒಂಟಿಯಾಗಿ ನೆಲೆಸಿದ್ದರು. ನಿನ್ನೆ ರಾತ್ರಿ ಫ್ಲಾಟ್‍ಗೆ ಬಂದ ಸ್ನೇಹಿತರಿಗೆ ಯಾವುದೇ ಪ್ರತಿಕ್ರಿಯೆ ಬಾರದೆ ಹಿನ್ನಲೆಯಲ್ಲಿ ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ ನಟಿಯ ಶವ ಪತ್ತೆಯಾಗಿದೆ. ಶವವನ್ನು ಮರಣೋತ್ತರ ಪರೀಕ್ಷೆ ಕಳುಹಿಸಲಾಗಿದ್ದು, ವರದಿ ಬಂದ ನಂತರ ಇದು ಆತ್ಮಹತ್ಯೆಯೇ, ಕೊಲೆಯೋ ಎಂಬುದು ತಿಳಿದುಬರಲಿದೆ.

 

► Follow us on –  Facebook / Twitter  / Google+

Facebook Comments

Sri Raghav

Admin