ಕೇರಳದ ಪಳ್ಳಿಪುರಂನಲ್ಲಿ ಫಿಶ್ ಕರಿ ಸೇವಿಸಿ 400 ಸಿಆರ್‍ಪಿಎಫ್ ಯೋಧರು ಅಸ್ವಸ್ಥ

ಈ ಸುದ್ದಿಯನ್ನು ಶೇರ್ ಮಾಡಿ

CRPF--01

ತಿರುವನಂತಪುರಂ, ಏ.2-ಫಿಶ್ ಕರಿ (ಮೀನು ಸಾರು) ಸೇವಿಸಿ ಕನಿಷ್ಠ 400 ಯೋಧರು ಅಸ್ವಸ್ಥರಾಗಿರುವ ಘಟನೆ ಕೇರಳದ ಪಳ್ಳಿಪುರಂನ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‍ಪಿಎಫ್) ಶಿಬಿರದಲ್ಲಿ ನಿನ್ನೆ ರಾತ್ರಿ ಸಂಭವಿಸಿದೆ. ಶಂಕಿತ ವಿಷಪೂರಿತ ಆಹಾರ ಸೇವಿಸಿ ವಾಂತಿ ಮತ್ತು ಬೇಧಿಯಿಂದ ಅಸ್ವಸ್ಥರಾದ ಯೋಧರನ್ನು ತಿರುವನಂತಪುರದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ತಿರುವೇಡ್ರಂ ಮೆಡಿಕಲ್ ಕಾಲೇಜು ಹಾಸ್ಪಿಟಲ್‍ನಲ್ಲಿ 109 ಯೋಧರನ್ನು ನಿಗಾ ಘಟಕದಲ್ಲಿ ಇಡಲಾಗಿದೆ. ನಿನ್ನೆ ರಾತ್ರಿ ರಾಜ್ಯ ಆರೋಗ್ಯ ಸಚಿವೆ ಕೆ.ಕ.ಶೈಲಜಾ ಭೈೀಟಿ ನೀಡಿ ಯೋಧರ ಆರೋಗ್ಯ ವಿಚಾರಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin