ಕೇವಲ ಮೂರೇ ಗಂಟೆಗಳಲ್ಲಿ ಸಬ್‍ವೇ ನಿರ್ಮಿಸಿ ದಾಖಲೆ..!

ಈ ಸುದ್ದಿಯನ್ನು ಶೇರ್ ಮಾಡಿ

Subway--001

ವಿಶಾಖಪಟ್ಟಣಂ, ಏ.27-ನಡುರಾತ್ರಿ 12:30. ಸುಮಾರು 200 ಮಂದಿ ಕಾರ್ಮಿಕರು ಅಲ್ಲಿ ಪ್ರತ್ಯಕ್ಷವಾಗಿದ್ದರು. ಅಷ್ಟರಲ್ಲಿ ಒಂದು ಭಾರೀ ಸ್ಕೈ ಲಿಫ್ಟ್ ಕ್ರೇನ್ ಬಂತು. ಅದರೊಟ್ಟಿಗೆ ಇನ್ನೂ ನಾಲ್ಕು ಕ್ರೇನ್, ಎರಡು ಜೆಸಿಬಿ ಬಂದವು. ಕೇವಲ ಮೂರೇ ಗಂಟೆಗಳಲ್ಲಿ ರೈಲು ಹಳಿಗೆ ಸಬ್‍ವೇ ನಿರ್ಮಿಸಿ ದಾಖಲೆ ಬರೆಯಲಾಯಿತು.   ಇದು ನಡೆದದ್ದು ವಿಶಾಖಂಪಟ್ಟಣಂ ಸಮೀಪ ಇರುವ ಎರಡು ಗ್ರಾಮಗಳ ನಡುವಿನ ರೈಲ್ವೆ ಕ್ರಾಸಿಂಗ್‍ನಲ್ಲಿ . ಕಳೆದ ಮೂವತ್ತು ವರ್ಷಗಳಿಂದ ಸಬ್‍ವೇ ನಿರ್ಮಾಣ ಕಾಮಗಾರಿ ನೆನೆಗುದಿಗೆ ಬಿದ್ದಿತು. ಗವರಕಚಂಚರ ಪಾಲೇನ್ ಮತ್ತು ರಾಮಮೂರ್ತಿ ಪಂತಲು ಪೇಟೆ ನಡುವೆ ರೈಲು ಹಾದು ಹೋಗುತ್ತದೆ. ಜನಕ್ಕೆ ಹತ್ತಾರು ರೈಲುಗಳು ಇಲ್ಲಿ ಸಂಚರಿಸುತ್ತವೆ. ಹಾಗಾಗಿ ಈ ಎರಡೂ ಗ್ರಾಮಗಳ ಜನ ಕ್ರಾಸಿಂಗ್ ದಾಟಲು ಇಡೀ ದಿನ ಗಂಟೆಗಟ್ಟಲೇ ಕಾಯಬೇಕು. ಹೆಚ್ಚಿನ ಸಂಖ್ಯೆಯ ರೈಲು ಸಂಚಾರದಿಂದ ಬಹುತೇಕ ಈ ಕ್ರಾಸಿಂಗ್ ಮುಚ್ಚಿಯೇ ಇರುತ್ತದೆ. ಕೆಲವೊಮ್ಮೆ ಅನೇಕರು ಹಾಗೇ ಹಳಿ ದಾಟಲು ಹೋಗಿ ಪ್ರಾಣ ಕಳೆದುಕೊಂಡದ್ದು ಇದೆ. 30 ವರ್ಷಗಳಿಂದಲೂ ಈ ಗ್ರಾಮಗಳ ಜನರದ್ದು ಇದೇ ಗೋಳು.ಆದರೆ ವಿಶಾಖಪಟ್ಟಣಂ ಪಶ್ಚಿಮ ವಿಧಾನಸಭಾ ಕ್ಷೇತ್ರದ ಶಾಸಕ ಪಿ.ಗಣಬಾಬು ಅವರ ವ್ಯಾಪ್ತಿಗೆ ಇದು ಬರುತ್ತದೆ. ಜನರ ಗೋಳನ್ನು ನೋಡಿದ ಗಣಬಾಬು ಇದಕ್ಕೊಂದು ಪರಿಹಾರ ಒದಗಿಸಲೇಬೇಕೆಂಬ ಸಂಕಲ್ಪ ಮಾಡಿದರು. ಅದಕ್ಕಾಗಿ ತಮ್ಮ ನಿಧಿಯಿಂದ ಮೂರು ಕೋಟಿ ರೂ. ತೆಗೆದಿಟ್ಟರು.   ಸಬ್‍ವೇ ನಿರ್ಮಾಣಕ್ಕೆ ಬೇಕಾಗುವ ಎಲ್ಲ ಸಲಕರಣಿಗಳನ್ನು ಒಂದೆರಡು ದಿನಗಳಲ್ಲಿ ಸಿದ್ದಪಡಿಸಿಕೊಂಡು ಮೊನ್ನೆ ರಾತ್ರಿ 12.30ರಿಂದ 3.30ರ ಒಳಗೆ ಕೇವಲ ಮೂರೇ ತಾಸುಗಳಲ್ಲಿ ಸಬ್‍ವೇ ನಿರ್ಮಿಸಿಬಿಟ್ಟರು.

ಬೆಳಗ್ಗೆ ಮಾಮೂಲಿನಂತೆ ರಸ್ತೆ ದಾಟಲು ಬಂದ ಗ್ರಾಮಸ್ಥರಿಗೆ ಅಚ್ಚರಿ ಕಾದಿತ್ತು. ಹಾಗಾಗಿ ಜನ ಸಂತಸದಿಂದ ರೈಲು ಮೇಲೆ ಹೋಗುತ್ತಿರುವಂತೆಯೇ ಸಬ್‍ವೇನಲ್ಲಿ ನಗು ನಗುತ್ತಾ ಸಂಚಾರ ನಡೆಸಿದರು.   ಇದೆಲ್ಲ ಸರಿ ಆದರೆ ನಮ್ಮ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಏಕೆ ಈ ರೀತಿ ತ್ವರಿತಗತಿಯ ಕಾಮಗಾರಿ ನಡೆಸದೆ ವರ್ಷಗಟ್ಟಲೇ ವಿಳಂಬ ಮಾಡುತ್ತಾರೆ ಎಂಬುದೇ ಈಗ ಯಕ್ಷ ಪ್ರಶ್ನೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin