ಕೇವಲ 1 ರೂ. ವರದಕ್ಷಿಣೆ ಪಡೆದ ಕುಸ್ತಿಪಟು ಯೋಗೇಶ್ವರ್ ದತ್..!

ಈ ಸುದ್ದಿಯನ್ನು ಶೇರ್ ಮಾಡಿ

Yogishwar-datt

ರೋಟಕ್, ಜ.15– ಕುಸ್ತಿ ವಿಭಾಗದಲ್ಲಿ 2012ರ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ದೇಶದ ಕೀರ್ತಿ ಪತಾಕೆಯನ್ನು ಹಾರಿಸಿದ್ದ ಯೋಗೇಶ್ವರ್ ದತ್ ಈಗ ಮತ್ತೊಂದು ಅಚ್ಚರಿ ಮೂಡಿಸಿದ್ದಾರೆ. ಹರಿಯಾಣದ ಕಾಂಗ್ರೆಸ್ ಮುಖಂಡ ಜೈಭಗವಾನ್ ಶರ್ಮಾರ ಪುತ್ರಿ ಶೀತಲ್ ಅವರನ್ನು ನಾಳೆ ಯೋಗೇಶ್ವರ್‍ದತ್ ವರಿಸಲಿದ್ದು ವರದಕ್ಷಿಣೆಯ ರೂಪದಲ್ಲಿ ಕೇವಲ 1 ರೂ. ಅನ್ನು ಪಡೆಯುವ ಮೂಲಕ ಎಲ್ಲರ ಚಿತ್ತ ತನ್ನತ್ತ ಹರಿಯುವಂತೆ ಮಾಡಿದ್ದಾರೆ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ವಧುವಿನ ಕುಟುಂಬದವರು ವರದಕ್ಷಿಣೆ ನೀಡಲು ಪಡುವ ಸಂಕಷ್ಟವನ್ನು ನಾನು ಕಂಡಿದ್ದೇನೆ ಆದ್ದರಿಂದ ವರದಕ್ಷಿಣೆ ಎಂಬ ಭೂತವನ್ನು ಹೋಗಲಾಡಿಸಲು ನಾನು ಸಾಂಕೇತಿಕ ರೂಪದಲ್ಲಿ ಕೇವಲ 1 ರೂ. ವರದಕ್ಷಿಣೆ ಪಡೆಯುತ್ತಿದ್ದೇನೆ ಎಂದು ವಿವರಿಸಿದ್ದಾರೆ.

ಈ ಹಿಂದೆ ನಾನು ಹೇಳಿದಂತೆ ಒಲಿಂಪಿಕ್ಸ್‍ನಲ್ಲಿ ಕಂಚಿನ ಪದಕವನ್ನು ಗೆಲ್ಲುವ ಮೂಲಕ ನನ್ನ ಮೊದಲ ಗುರು ಮಾಸ್ಟರ್ ಸತ್‍ಬೀರ್‍ಸಿಂಗ್‍ಗೆ ನೀಡಿದ್ದ ಭರವಸೆಯನ್ನು ಈಡೇರಿಸಿದಂತೆ ಈಗ ರೂ.1 ವರದಕ್ಷಿಣೆಯನ್ನು ಪಡೆಯುವ ಮೂಲಕ ತಂದೆಗೆ ನೀಡಿದ ಭರವಸೆಯನ್ನು ಈಡೇರಿಸಿದ ತೃಪ್ತಿ ಇದೆ ಎಂದು ಯೋಗೇಶ್ವರ್ ದತ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಯೋಗೇಶ್ವರ್‍ದತ್ ಹಾಗೂ ಶೀತಲ್‍ರ ವಿವಾಹವು ನಾಳೆ ನವದೆಹಲಿಯಲ್ಲಿ ನಡೆಯಲಿದ್ದು ರಾಜಕೀಯ ಹಾಗೂ ಕ್ರೀಡಾ ರಂಗದ ಅನೇಕ ಪ್ರಮುಖರು ಮದುವೆಗೆ ಆಗಮಿಸಲಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin