ಕೇವಲ 20 ರೂ.ಗಾಗಿ ಅಣ್ಣನನ್ನು ಕೊಂದ ಮದ್ಯವ್ಯಸನಿ

ಈ ಸುದ್ದಿಯನ್ನು ಶೇರ್ ಮಾಡಿ

Brother-Killed

ನವದೆಹಲಿ, ಫೆ.27-ಮದ್ಯ ಖರೀದಿಸಲು 20 ರೂ. ನೀಡಲು ನಿರಾಕರಿಸಿದ ಅಣ್ಣನನ್ನೇ ಇರಿದು ಕೊಂದ ಮದ್ಯವ್ಯಸನಿ ತಮ್ಮನನ್ನು ಪೊಲೀಸರು ಬಂಧಿಸಿದ್ದಾರೆ.  ದೆಹಲಿಯ ಖಡ್ಡಾ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಇರಿತಕ್ಕೆ ಒಳಗಾದ ಬಂಟಿ (23) ಬಾಬು ಜಗಜೀವನ ರಾಮ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಈ ಸಂಬಂಧ ತಮ್ಮ ಪಂಕಜ್‍ನನ್ನು (21) ಪೊಲೀಸರು ಬಂಧಿಸಿದ್ದಾರೆ.  ಅಣ್ಣ-ತಮ್ಮಂದಿರ ಜಗಳ ಕೊಲೆಯಲ್ಲಿ ಪರ್ಯಾವಸನವಾಗಿದ್ದರೂ, ದರೋಡೆ ಯತ್ನವನ್ನು ವಿಫಲಗೊಳಿಸುವಾಗ ಇರಿತಕ್ಕೆ ಒಳಗಾಗಿ ಬಂಟಿ ಸಾವಿಗೀಡಾಗಿದ್ದಾನೆ ಎಂದು ಪೊಲೀಸರನ್ನು ದಿಕ್ಕು ತಪ್ಪಿಸುವ ಪ್ರಯತ್ನ ನಡೆದಿತ್ತು. ಅನುಮಾನಗೊಂಡ ಪೊಲೀಸರು ಬಂಟಿ ಮತ್ತು ಆತನ ತಾಯಿಯನ್ನು ವಿಚಾರಣೆಗೆ ಒಳಪಡಿಸಿದಾಗ ಕೊಲೆ ಹಿಂದಿರುವ ಸತ್ಯ ಬಯಲಾಯಿತು. ಬಂಟಿ ಮನೆಯಲ್ಲಿ ರಕ್ತಸಿಕ್ತ ಬಟ್ಟೆಗಳು ಮತ್ತು ಚಾಕುವನ್ನು ಪೊಲೀಸರು ವಶಪಡಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin