ಕೇವಲ 25 ಸಾವಿರ ಹಣಕ್ಕಾಗಿ ಸ್ನೇಹಿತನ ರುಂಡ ಚೆಂಡಾಡಿದ ಗೆಳೆಯ

ಈ ಸುದ್ದಿಯನ್ನು ಶೇರ್ ಮಾಡಿ

MUrder-asfaSFA

ದೇವನಹಳ್ಳಿ, ಆ.22-ಸ್ನೇಹಿತರೆಂದರೆ ಪ್ರಾಣಕ್ಕೆ ಪ್ರಾಣ ಕೊಡುವವರು, ಕಷ್ಟಕ್ಕೆ ನೆರವಾಗುವವರು ಎಂದು ನಂಬಿದ್ದೇವೆ. ಆದರೆ 25 ಸಾವಿರ ಹಣಕ್ಕಾಗಿ ತನ್ನ ಗೆಳೆಯನನ್ನೇ ಕೊಂದು ರುಂಡ-ಮುಂಡ ಬೇರ್ಪಡಿಸಿರುವುದು ಸಾರ್ವಜನಿಕರನ್ನು ಬೆಚ್ಚಿ ಬೀಳಿಸಿದೆ. ಕೇವಲ 25 ಸಾವಿರ ಹಣದ ವಿಚಾರವಾಗಿ ಗೆಳೆಯನನ್ನು ಚಾಕುವಿನಿಂದ ಕೊಚ್ಚಿ ಕೊಲೆ ಮಾಡಿ, ಆತನ ರುಂಡ ಕತ್ತರಿಸಿಕೊಂಡು ಪೊಲೀಸ್ ಠಾಣೆಗೆ ಹೋಗಿ ಆರೋಪಿ ಶರಣಾಗಿರುವ ಘಟನೆ ಭೀಭತ್ಸ ಘಟನೆ ತಾಲೂಕಿನ ಉಗನವಾಡಿಯಲ್ಲಿ ತಡರಾತ್ರಿ ನಡೆದಿದೆ.  ತಾಲೂಕಿನ ಕೆಂಪತಿಮ್ಮನಹಳ್ಳಿ ನಿವಾಸಿ ಮಂಜುನಾಥ್ (28)ಬರ್ಬರವಾಗಿ ಹತ್ಯೆಯಾಗಿರುವ ವ್ಯಕ್ತಿ.

ಉಗನವಾಡಿ ಗ್ರಾ.ಪಂ. ಸದಸ್ಯ ನಾರಾಯಣಸ್ವಾಮಿ ಮಗ ಶಶಿಕುಮಾರ್ ಎಂಬಾತ ತನ್ನ ಗೆಳೆಯ ಮಂಜುನಾಥ್ ಅವರಿಗೆ 25 ಸಾವಿರ ಹಣ ಕೊಟ್ಟಿದ್ದ ಎನ್ನಲಾಗಿದ್ದು, ಇದನ್ನು ಕೇಳಲು ಹೋದಾಗ ಗಲಾಟೆ ನಡೆದಿದ್ದು, ಈ ಗಲಾಟೆ ವಿಕೋಪಕ್ಕೆ ತಿರುಗಿ ಮಂಜುನಾಥನನ್ನು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿ ನಂತರ ಆತನ ತಲೆಯನ್ನು ಕತ್ತರಿಸಿಕೊಂಡು ಹೋಗಿ ಶಶಿಕುಮಾರ್ ಪೊಲೀಸರಿಗೆ ಶರಣಾಗಿದ್ದಾನೆ.  ಕೆಂಪತಿಮ್ಮನಹಳ್ಳಿ ಗ್ರಾಮದ ಮಂಜುನಾಥ್ ಮತ್ತು ಶಶಿಕುಮಾರ್ ಸ್ನೇಹಿತರಾಗಿದ್ದು, ಇವರ ನಡುವೆ ಹಣದ ವ್ಯವಹಾರವಿತ್ತು. ಇಬ್ಬರೂ ನಿನ್ನೆ ಮದ್ಯ ಸೇವಿಸಿ ಜಗಳವಾಡಿಕೊಂಡು ರಾತ್ರಿ 11 ರ ಸಮಯದಲ್ಲಿ ಉಗನವಾಡಿ ಗೇಟ್ ಬಳಿ ನಿರ್ಜನ ಪ್ರದೇಶದ ಕಾಂಪೌಂಡ್ ಬಳಿ ಬಂದಿದ್ದಾರೆ. ಅಲ್ಲಿ ಜಗಳ ವಿಕೋಪಕ್ಕೆ ತಿರುಗಿದ ಶಶಿಕುಮಾರ್ ಆಕ್ರೋಶಗೊಂಡು ಮಂಜುನಾಥನ ಮೇಲೆ ಹಲ್ಲೆ ಮಾಡಿ ಆತನ ತಲೆ ಕಡಿದು ವಿಶ್ವನಾಥಪುರ ಠಾಣೆಗೆ ರುಂಡದೊಂದಿಗೆ ಬಂದು ಶರಣಾಗಿದ್ದಾನೆ. ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಡಿವೈಎಸ್ಪಿ, ಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿ ಸ್ಥಳದಲ್ಲಿದ್ದ ಮುಂಡವನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

 

► Follow us on –  Facebook / Twitter  / Google+

Facebook Comments

Sri Raghav

Admin