ಕೈಕೊಟ್ಟ ಕಬ್ಬು-ಭತ್ತ : ರೈತ ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

manjegowda-suicede

ಕೆ.ಆರ್.ಪೇಟೆ, ಆ.9- ಕಬ್ಬು ಮತ್ತು ಭತ್ತದ ಬೆಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಪಡೆದ ಸಾಲ ತೀರಿಸಲಾಗದೆ ನೊಂದ ರೈತ ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಬೂಕನಕೆರೆ ಹೋಬಳಿ ಅರೆಬೂವನಹಳ್ಳಿ ಗ್ರಾಮದಲ್ಲಿ ನಡೆದಿದೆ.ಗ್ರಾಮದ ದೊಳ್ಳೇಗೌಡರ ಮಗ ಮಂಜೇಗೌಡ (41) ಮೃತಪಟ್ಟವರಾಗಿದ್ದಾರೆ.
ಘಟನೆ ವಿವರ:

ಮಂಜೇಗೌಡ ಅವರು ಒಂದೂವರೆ ಕರೆ ಜಮೀನಿನಲ್ಲಿ ಕಬ್ಬು ಮತ್ತು ಭತ್ತ ಬೆಳೆಯುತ್ತಿದ್ದರು. ಇದಕ್ಕಾಗಿ ಪ್ರಾಥಮಿಕ ಕೃಷಿ ಭೂ ಅಭಿವೃದ್ಧಿ ಬ್ಯಾಂಕ್‍ನಿಂದ ಸುಮಾರು 1 ಲಕ್ಷ ರೂ. ಸಾಲ ಹಾಗೂ ಸುಮಾರು 3ಲಕ್ಷ ರೂ. ಕೈಸಾಲ ಮಾಡಿಕೊಂಡಿದ್ದರು.ಮಳೆಯ ಅಭಾವದಿಂದ ಹೇಮಾವತಿಯಲ್ಲಿ ಕಾಲುವೆಯಲ್ಲಿ ನೀರು ಹರಿಯದ ಕಾರಣ ಕಬ್ಬು ಒಣಗಿ ಹೋಗಿತ್ತು. ಕಬ್ಬಿನ ಬೆಳೆ ಕೈಗೆ ಸಿಗದ ಹಿನ್ನೆಲೆಯಲ್ಲಿ ಮನನೊಂದು ಭಾನುವಾರ ಸಂಜೆ ಅರೆಬೂವನಹಳ್ಳಿ ಮನೆಯಲ್ಲಿ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ತೀವ್ರತರಹದ ಸುಟ್ಟ ಗಾಯಗಳಿಂದ ಅಸ್ವಸ್ಥಗೊಂಡಿದ್ದರು. ತಕ್ಷಣ ಅವರನ್ನು ಬೂಕನಕೆರೆ ಸರಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸ ಫಲಕಾರಿಯಾಗದೇ ನಿನ್ನೆ ಮೃತಪಟ್ಟಿದ್ದಾರೆ.ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments

Sri Raghav

Admin