ಕೈಕೊಟ್ಟ ಮತಯಂತ್ರ, ಒಂದೂವರೆ ಗಂಟೆಗೂ ಹೆಚ್ಚು ಕಾಲ ಕಾದು ನಿಂತ ಮತದಾರರು

ಈ ಸುದ್ದಿಯನ್ನು ಶೇರ್ ಮಾಡಿ

Voting-Line

ಚಿಕ್ಕಮಗಳೂರು, ಮೇ 12-ಮತಯಂತ್ರ ಕೈಕೊಟ್ಟ ಹಿನ್ನೆಲೆಯಲ್ಲಿ ಒಂದೂವರೆ ಗಂಟೆಗೂ ಹೆಚ್ಚು ಕಾಲ ಮತದಾರರು ತಮ್ಮ ಅವಕಾಶಕ್ಕಾಗಿ ಕಾದು ಕುಳಿತ ಪ್ರಸಂಗ ಶಾಂತಿನಗರ(ಉಪ್ಪಳ್ಳಿ) 116ರಲ್ಲಿ ನಡೆದಿದೆ. ಬೆಳಗ್ಗೆ 7 ಗಂಟೆಯಿಂದಲೇ ಆರಂಭವಾಗಬೇಕಿದ್ದ ಮತದಾನ ಇವಿಎಂ ಯಂತ್ರ ಕೈಕೊಟ್ಟಿದ್ದರಿಂದ ಸರಿಯಾದ ಸಮಯಕ್ಕೆ ಮತದಾನ ಆರಂಭವಾಗಲಿಲ್ಲ. ಬೆಳಗ್ಗೆ 7 ಗಂಟೆಯಿಂದ ಮತಗಟ್ಟೆಯಲ್ಲೇ ಕಾದು ಕುಳಿತ ಮತದಾರರು ಮತದಾನಕ್ಕೆ ಅವಕಾಶವಿಲ್ಲದೆ ನಿಲ್ಲುವಂತಹ ಪರಿಸ್ಥಿತಿ ಎದುರಾಯಿತು. (ರಾಜ್ಯ  ವಿಧಾನಸಭಾ ಚುನಾವಣೆ : ಮತದಾನದ Live Updates )

ದಾವಣಗೆರೆ:
ಮತಯಂತ್ರದಲ್ಲಿ ಕಂಡು ಬಂದ ದೋಷದಿಂದ ತಾಲ್ಲೂಕಿನ ಭಾವಿಹಳನ ಬರಾಕ್ 123ರಲ್ಲಿ ಮತದಾನಕ್ಕೆ ತೊಂದರೆ ಎದುರಾಗಿತ್ತು. ಬೆಳಗ್ಗೆ 7ರಿಂದ ಆರಂಭವಾಗಬೇಕಿದ್ದ ಮತದಾನ ಇವಿಎಂ ದೋಷದಿಂದ ಸಮಯಕ್ಕೆ ಸರಿಯಾಗಿ ಆರಂಭವಾಗಿರಲಿಲ್ಲ. ಮತದಾರರು ಮತದಾನ ತಡವಾಗಿದ್ದರಿಂದ ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಬಾಗಲಕೋಟೆ:
ಮತಯಂತ್ರ ಕೈಕೊಟ್ಟಿದ್ದರಿಂದ ಮತದಾರರು 2 ಗಂಟೆಗೂ ಹೆಚ್ಚುಕಾಲ ಕಾದು ಕುಳಿತ ಘಟನೆ ಜಮಖಂಡಿ ತಾಲ್ಲೂಕಿನ ಬುದ್ನಿ ಗ್ರಾಮದ ಮತಗಟ್ಟೆಯಲ್ಲಿ ನಡೆದಿದೆ. ಬೆಳಗ್ಗೆ 7 ಗಂಟೆಗೆ ಆರಂಭವಾಗಬೇಕಿದ್ದ ಮತದಾನ 9 ಗಂಟೆಯಾದರೂ ಆರಂಭವಾಗದ ಕಾರಣ ಮತದಾರರು ಕಾದು ಕುಳಿತು ಬೇಸರಗೊಂಡು ಆಕ್ರೋಶ ವ್ಯಕ್ತಪಡಿಸಿದರು.  ಇವಿಎಂ ಯಂತ್ರದ ದೋಷದಿಂದ ಮತದಾನಕ್ಕೆ ಅಡಚಣೆಯಾದರೂ ಸ್ಥಳಕ್ಕೆ ಸಂಬಂಧಿಸಿದ ಅಧಿಕಾರಿಗಳು ಬಾರದ ಹಿನ್ನೆಲೆಯಲ್ಲಿ ಮತದಾರರು ಅಸಮಾಧಾನ ವ್ಯಕ್ತಪಡಿಸಿದರು.

Facebook Comments

Sri Raghav

Admin