ಕೈಗೆ ಹಗ್ಗ ಕಟ್ಟಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

gadaga

ಗದಗ,ಸೆ.22- ಕಾವೇರಿ ಜಲ ವಿವಾದದ ಹಿನ್ನೆಲೆಯಲ್ಲಿ ಕನ್ನಡ, ದಲಿತಪರ ಹಾಗೂ ರೈತ ಸಂಘಟನೆಗಳು ಕೇಂದ್ರ ಹಾಗೂ ರಾಜ್ಯ ಸರಕಾರದ ವಿರುದ್ದ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ಹೊರ ಹಾಕಿದರು. ನಗರದ ಮಧ್ಯದಲ್ಲಿರುವ ಗಾಂಧಿ ಸರ್ಕಲ್‍ನಲ್ಲಿ ಸಂಘಟನೆಗಳು ಕೈಗೆ ಹಗ್ಗ ಕಟ್ಟಿ ಮಾನವ ಸರಪಳಿ ನಿರ್ಮಿಸುವ ಮೂಲಕ ರಸ್ತೆ ತಡೆ ನಡೆಸಿ, ತಾಪಂ ಆವರಣದಲ್ಲಿರುವ ನೀರಿನ ಟ್ಯಾಂಕ್ ಹತ್ತುವುದರೊಂದಿಗೆ, ಮಹಾತ್ಮ ಗಾಂಧೀಜಿ ಅವರ ಪ್ರಮುಖ ಮೂರು ತತ್ವಗಳಾದ ಕೆಟ್ಟದನ್ನು ಕೇಳಬಾರದು, ನೋಡಬಾರದು ಹಾಗೂ ಮಾತುನಾಡಬಾರದು ಎಂಬುದನ್ನು ಪ್ರಾಯೋಗಿಕವಾಗಿ ತೋರುವ ಮೂಲಕ ವಿಶೇಷ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.

ಕನ್ನಡ ಹಾಗೂ ದಲಿತ ಪರ ಸಂಘಟನೆಯ ಸದಸ್ಯ ಸಯ್ಯದ್ ಖಾಲೀದ್ ಕೊಪ್ಪಳ ಮಾತನಾಡಿ, ಕಾವೇರಿಯ ವಿಷಯದಲ್ಲಿ ರಾಜಕೀಯ ಪಕ್ಷಗಳು ಹಾಗೂ ಸಿಎಂ ಸಿದ್ದರಾಮಯ್ಯ ರಾಜಕೀಯ ಮಾಡದೇ ರೈತರಿಗೆ ನೀರು ಕೊಡಿಸುವ ಹಿನ್ನಲೆಯಲ್ಲಿ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ರೈತ ಹೋರಾಟಕ್ಕೆ ಬೆಂಬಲ ನೀಡಬೇಕಾಗಿದೆ. ಕೇಂದ್ರ ಸರಕಾರ ಕೇಂದ್ರದ ಸಮಿತಿ ಕಳಿಸಿ ರಾಜ್ಯದ ಜಲ ಪರಿಸ್ಥಿತಿಯ ಬಗ್ಗೆ ಸಮೀಕ್ಷೆ ನಡೆಸಲಿ. ಜಲ ವಿವಾದ ಬಗೆಹರಿಸುವಲ್ಲಿ ಮದ್ಯಸ್ಥಿಕೆ ವಹಿಸಲಿ ಎಂದು ಒತ್ತಾಯಿಸಿದರು.

ಕನ್ನಡ ಹಾಗೂ ದಲಿತ ಪರ ಸಂಘಟನೆಯ ಸದಸ್ಯ ಚಂದ್ರಕಾಂತ ಚವಾಣ ಮಾತನಾಡಿ, ಪ್ರಜ್ಞಾಹೀನ ಸ್ಥಿತಿಯಲ್ಲಿ ಕಾವೇರಿ ಜಲ ವಿವಾದ ಕುರಿತು ವಾದ ಮಂಡಿಸುತ್ತಿರುವ ನಾರಿಮನ್ ವಜಾಕ್ಕೆ ಆಗ್ರಹಿಸಿದರು. ಕನ್ನಡಿಗರ ತಾಳ್ಮೆ ಪರೀಕ್ಷಿಸಲು ಕೇಂದ್ರ ಸರಕಾರ ಹಾಗೂ ತಮಿಳುನಾಡು ಸರಕಾರ ಅವಕಾಶ ಕೊಡಬಾರದು ಎಂದು ಆಗ್ರಹಿಸಿದರು.ರೈತ ಮುಖಂಡ ಶಾಂತ ಸ್ವಾಮಿಮಠ ಮಾತನಾಡಿ, ರಾಜ್ಯದಲ್ಲಿ ಬರಗಾಲ ಬಿದ್ದು ಸಾಲದ ಒತ್ತಡದಿಂದ ಆತ್ಮಹತ್ಯಗೆ ಶರಣಾಗಿದ್ದಾರೆ. ಅವರ ಪರಿವಾರಕ್ಕೆ ಪರಿಹಾರ ನೀಡಲು ಆಗ್ರಹಿಸಿದರು.ಜೈಬೀಮ ಸೇನಾ ಜಿಲ್ಲಾದ್ಯಕ್ಷ ಗಣೇಶ ಹುಬ್ಬಳ್ಳಿ, ಕನ್ನಡ ಜನಾಭಿವೃದ್ದಿ ವೇದಿಕೆ ಅದ್ಯಕ್ಷ ಹುಲ್ಲೇಶ ಭಜಂತ್ರಿ, ಕರವೇ ಶಿವರಾಮೆಗೌಡ ಬಣದ ಜಿಲ್ಲಾದ್ಯಕ್ಷ ಬೂದೇಶ ಬ್ಯಾಹಟ್ಟಿ, ಮುಖಂಡ ರಾಘು ಪರಾಪೂರ, ಬಸವರಾಜ ಗಡ್ಡೆಪ್ಪನವರ, ನವ ನಿರ್ಮಾಣ ಸೇನೆ ಜಿಲ್ಲಾದ್ಯಕ್ಷ ಕಲ್ಮೇಶ ವಡ್ಡಿನ ಸೇರಿದಂತೆ ಕಾರ್ಯಕರ್ತರು ಹಾಜರಿದ್ದರು.

► Follow us on –  Facebook / Twitter  / Google+

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin