ಕೈಹಿಡಿದ ಗಂಡನ ಕತ್ತುಹಿಸುಕಿ ಕೊಂದ ಹೆಂಡತಿ

ಈ ಸುದ್ದಿಯನ್ನು ಶೇರ್ ಮಾಡಿ

killing--husband--wife

ರಾಯಚೂರು, ಫೆ.5- ಕೈಹಿಡಿದ ಹೆಂಡತಿಯೇ ಗಂಡಯನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಭೀಕರ ಘಟನೆ ಸಿಂಧನೂರು ತಾಲ್ಲೂಕಿನ ಕಲಮಂಗಿ ಗ್ರಾಮದಲ್ಲಿ ನಡೆದಿದೆ.  ಮೃತನನ್ನು ಬಸವನಗೌಡ (43) ಎಂದು ತಿಳಿದು ಬಂದಿದ್ದು, ಪ್ರಸ್ತುತ ಈತನ ಪತ್ನಿಯನ್ನು ದೇವಮ್ಮ(35)ಳನ್ನು ಪೊಲೀಸರು ಬಂಧಿಸಿದ್ದಾರೆ.ಕಳೆದ ರಾತ್ರಿ ದಂಪತಿ ನಡುವೆ ಜೋರು ಜಗಳ ನಡೆದಿದ್ದು, ಅಕ್ಕಪಕ್ಕದವರು ಪ್ರತಿ ದಿನ ನಡೆಯುವ ಗಲಾಟೆ ಎಂದೇ ಭಾವಿಸಿ ಸುಮ್ಮನಾಗಿದ್ದರು. ಆದರೆ, ಇಂದು ಮುಂಜಾನೆ ದೇವಮ್ಮ ಗಂಡನಿಗೆ ಹೃದಯಾಘಾತವಾಗಿದೆ ಎಂದು ನಾಟಕವಾಡುತ್ತಿದ್ದಾಗ ಸ್ಥಳೀಯರೊಬ್ಬರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಕತ್ತು ಹಿಸುಕಿ ಕೊಲೆ ಮಾಡಿರುವುದು ತಿಳಿದ ಪೊಲೀಸರು ದೇವಮ್ಮಳನ್ನು ವಿಚಾರಣೆಗೊಳಪಡಿಸಿದಾಗ ಪ್ರಕರಣದ ಸತ್ಯಾಂಶ ಹೊರ ಬಿದ್ದಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin