ಕೊಟ್ಟಿಗೆಗೆ ನುಗ್ಗಿ 30 ಕುರಿಗಳನ್ನು ಕೊಂದ ಚಿರತೆ

ಈ ಸುದ್ದಿಯನ್ನು ಶೇರ್ ಮಾಡಿ

sfsfsafa
ಕೋಲಾರ, ಮಾ.10- ಕೊಟ್ಟಿಗೆಗೆ ನುಗ್ಗಿದ ಚಿರತೆ 30 ಕುರಿಗಳನ್ನು ಸಾಯಿಸಿರುವ ಘಟನೆ ತಾಲೂಕಿನ ಕ್ಯಾಲನೂರು ಗ್ರಾಮದಲ್ಲಿ ನಡೆದಿದೆ. ಸುನಂದಮ್ಮ ಎಂಬುವವರಿಗೆ ಸೇರಿದ 30 ಕುರಿಗಳನ್ನು ಚಿರತೆ ಸಾಯಿಸಿದ್ದು, ಕುಟುಂಬ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದೆ.  ಆಹಾರ ಅರಸಿ ನಾಡಿಗೆ ಬಂದಿದ್ದ ಚಿರತೆ ಕೊಟ್ಟಿಗೆಯೊಳಗೆ ನುಗ್ಗಿ ಮನಸೋ ಇಚ್ಚೆ ಕುರಿಗಳನ್ನು ಕಚ್ಚಿ ಸಾಯಿಸಿದೆ.  ಕುರಿಗಳ ಅರಚಾಟ ಕೇಳಿ ಸುನಂದಮ್ಮ ಹೊರಬಂದು ನೋಡಿದಾಗ ಕುರಿಗಳು ಸತ್ತು ಬಿದ್ದಿರುವುದು ಬೆಳಕಿಗೆ ಬಂದಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Facebook Comments

Sri Raghav

Admin