ಕೊಟ್ಯಂತರ ರೂ. ಚೀಟಿ ಹಣ ಲಪಟಾಯಿಸಿ ನಾಪತ್ತೆಯಾಗಿದ್ದ ದಂಪತಿ ಪೊಲೀಸ್ ಠಾಣೆಯಲ್ಲಿ ಪ್ರತ್ಯಕ್ಷ

ಈ ಸುದ್ದಿಯನ್ನು ಶೇರ್ ಮಾಡಿ

Koratagere-Couple

ಕೊರಟಗೆರೆ, ಮಾ.3- ಸಾರ್ವಜನಿಕರ ಕೊಟ್ಯಂತರ ರೂ. ಹಣ ಲಪಟಾಯಿಸಿ ನಾಪತ್ತೆಯಾಗಿದ್ದ ದಂಪತಿ ಕೊರಟಗೆರೆ ಪೊಲೀಸ್ ಠಾಣೆಗೆ ಶರಣಾಗಿ ವಸೂಲಿಯಾದ 6 ಕೋಟಿ ಹಣ ಹಿಂದಿರುಗಿಸುವುದಾಗಿ ಹೇಳಿಕೆ ನೀಡುವ ಮೂಲಕ ಇಡೀ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.   ಕೊರಟಗೆರೆ ಪಟ್ಟಣದ ಕೆಇಬಿ ಕಾಲೋನಿಯ ಪ್ರಭಾವತಿ ರವಿಕುಮಾರ್ ರವರು ಇತ್ತೀಚೆಗೆ ಸಾವಿರಾರು ಜನರುಗಳಿಂದ ಏಜೆಂಟರುಗಳ ಮೂಲಕ ಕೋಟ್ಯಾಂತರ ರೂಪಾಯಿ ಹಣವನ್ನ ಚೀಟಿ ಹಾಗೂ ಬೆನಿಫಿಟ್ ಸ್ಕೀಂಗಳ ಮೂಲಕ ವಸೂಲಿ ಮಾಡಿ ಕೆಲವು ದಿನಗಳಿಂದ ಕಣ್ಮಾರೆಯಾಗಿದ್ದಾರೆ ಎಂದು ತಿಳಿದ ಏಜೆಂಟರು ಹಾಗೂ ಚಂದದಾರರು ದಿಗ್ಭ್ರಮೆಗೊಂಡು ಕಳೆದ 2-3 ದಿನಗಳಿಂದ ಪೊಲೀಸ್ ಠಾಣೆಗೆ ದೌಡಾಯಿಸಿ ನ್ಯಾಯ ದೊರಕಿಸಿಕೊಡಿ ಎಂದು ಅಳಲು ತೋಡಿಕೊಂಡಿದ್ದಾರೆ.

ಪ್ರಭಾವತಿಯವರು ಪೊಲೀಸ್ ಠಾಣೆಯಲ್ಲಿ ಪ್ರತ್ಯಕ್ಷವಾಗಿ ಹೇಳಿಕೆ ನೀಡುವ ಮೂಲಕ ಚಂದಾದಾರರು ಮತ್ತು ಏಜಂಟರುಗಳಿಗೆ ಸಮಾಧಾನ ತಂದಿದೆ.  ಕಳೆದ 10 ವರ್ಷಗಳಿಂದ ಪ್ರಭಾವತಿ ರವಿಕುಮಾರ್‍ರವರು ಚೀಟಿ ಹಾಗೂ ಬೆನಿಫಿಟ್ ಸ್ಕೀಂ ನಡೆಸಿಕೊಂಡು ಬಂದಿದ್ದು, ತಮ್ಮ ಏಜಂಟರುಗಳ ಮೂಲಕ ತಾಲ್ಲೂಕು ಸೇರಿದಂತೆ, ಜಿಲ್ಲೆ ಹಾಗೂ ಹೊರ ಜಿಲ್ಲೆಗಳಲ್ಲಿ ಸಾವಿರಾರು ಜನ ಚಂದಾದಾರರ ಮೂಲಕ ಕೋಟ್ಯಂತರ ರೂಪಾಯಿ ಹಣ ವ್ಯವಹಾರ ನಡೆಸುತ್ತಿದ್ದು, ಹತ್ತು ವರ್ಷಗಳಿಂದಲೂ ಯಾವುದೇ ಸಮಸ್ಯೆ ಹಾಗೂ ದೂರು ಬಾರದ ರೀತಿಯಲ್ಲಿ ನಡೆಸಿಕೊಂಡು ಬಂದಿದ್ದು ಆದರೆ ದುರಾದೃಷ್ಟಕರ ಎಂಬುವಂತೆ ಕಣ್ಮರೆಯಾಗಿರುವುದನ್ನು ಕಂಡ ಸಾರ್ವಜನಿಕರು ನಮ್ಮ ಹಣವನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ ಎಂದು ಊಹಿಸಿಕೊಂಡು ಠಾಣೆ ಮೆಟ್ಟಿಲೇರಿ ಇಷ್ಟು ಗೊಂದಲ ಸೃಷ್ಟಿಯಾಗಿ ಈಗ ಸ್ವತಃ ವ್ಯವಸ್ಥಾಪಕರಾದ ಪ್ರಭಾವತಿ ರವಿಕುಮಾರ್ ಠಾಣೆಗೆ ಭೇಟಿಯಾಗಿ ಹೇಳಿಕೆ ನೀಡಿರುವುದು ಜನರಲ್ಲಿ ನಿರೀಕ್ಷೆ ಮೂಡಿದಂತಾಗಿದೆ.

ಕೇವಲ 6 ಕೋಟಿಯಾಗಿರುವುದರಿಂದ ಒಂದ್ದಕ್ಕೊಂದು ಸಂಬಂಧಿಸಿಲ್ಲವಾದ್ದರಿಂದ ಮುಂದಿನ ಪೊಲೀಸ್ ತನಿಖೆಯ ನಂತರ ಸತ್ಯಾಂಶ ಹೊರ ಬೀಳಲಿದೆ ಎನ್ನಲಾಗಿದೆ.   ಪ್ರಭಾವತಿ ರವಿಕುಮಾರ್ ರವರು ಠಾಣೆಗೆ ಭೇಟಿ ನೀಡಿ ನನಗೆ 20 ರಿಂದ 22 ಏಜೆಂಟರುಗಳಿದ್ದು, ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಗಳ ಎಲ್ಲಾ ಏಜೆಂಟರುಗಳ ಚಂದದಾರರಿಂದ ಸುಮಾರೂ 6 ಕೋಟಿ ಹಣವನ್ನು ವಸೂಲಿಯಾಗಿದ್ದು, ನೋಟ್‍ಬ್ಯಾನ್ ನಂತರ ವಸೂಲಾತಿಯಲ್ಲಿ ಹಿನ್ನೆಡೆಯಾಗಿ ಚಂದಾದಾರರಿಗೆ ನಮ್ಮಿಂದ ವಸೂಲಿಯಾದ ಹಣ ಮಾತ್ರ ವಿತರಣೆಯಾಗಿದ್ದು, ಚಂದಾದಾರರಿಂದ ಬರುವ ಹಣದಲ್ಲಿ ಬಹಳಷ್ಟು ಇಳಿಮುಖವಾದ ಕಾರಣ ಈ ಗೊಂದಲಕ್ಕೆ ಕಾರಣವಾಗಿದೆ. ನಾವು ಎಲ್ಲಿಯೂ ಜನರಿಗೆ ಯಾಮಾರಿಸಿ ತಲೆಮರೆಸಿಕೊಂಡಿರಲಿಲ್ಲ, ನಾನು ಹಾಗೂ ನನ್ನ ಕುಟುಂಬ ಸಮೇತ ಶಿರಡಿಗೆ ದೇವರ ದರ್ಶನಕ್ಕೆ ಹೋದ ಕಾರಣ 2-3 ದಿನಗಳ ಕಾಲ ಸಂಪರ್ಕಕ್ಕೆ ಸಿಗದ ಕಾರಣ ಈ ಗೊಂದಲಕ್ಕೆ ಕಾರಣವಾಗಿದೆ ಎಂದು ತಿಳಿಸಿದರು.

ಒಟ್ಟಾರೆ ಪ್ರಭಾವತಿ ರವಿಕುಮಾರ್ ರವರು ಕೊರಟಗೆರೆ ಪೊಲೀಸ್ ಠಾಣೆಗೆ ಶರಣಗತಿಯಾಗಿದ್ದಾರೆ ಎಂಬ ಮಾಹಿತಿ ಕಾಳ್ಗಿಚ್ಚಿನಂತೆ ಒಬ್ಬರಿಂದ ಒಬ್ಬರಿಗೆ ಹರಡಿದ ತಕ್ಷಣ ಸಾವಿರಾರು ಜನ ಠಾಣೆ ಮುಂದೆ ಜಮಾವಣೆಗೊಂಡು ಲಕ್ಷಾಂತರ ರೂಪಾಯಿ ಹಣ ಕಟ್ಟಿದ ಬಹಳಷ್ಟು ಜನ ಚಂದಾದಾರರು ನಮ್ಮ ಹಣ ನಮಗೆ ವಾಪಾಸ್ ನೀಡಿದರೆ ಸಾಕು ಹಾಗೂ ಠಾಣೆಯ ಒಳಗೆ ಯಾವ ಬೆಳವಣಿಗೆ ನಡೆಯುತ್ತಿದೆ ಎಂದು ಜಾತಕ ಪಕ್ಷಿಗಳಂತೆ ಹೊರಜಿಲ್ಲೆಯ ಜನರೂ ಕಾಯುತ್ತಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin