ಕೊಡಗಿನ ಬೆಡಗಿ ನಟಿ ನಿಧಿ ಸುಬ್ಬಯ್ಯ ಮ್ಯಾರೇಜ್ ಡೇಟ್ ಫಿಕ್ಸ್

ಈ ಸುದ್ದಿಯನ್ನು ಶೇರ್ ಮಾಡಿ

Nidhi-Subbaiah

ಬೆಂಗಳೂರು, ಜ.28- ಪಂಚರಂಗಿ ನಟಿ ಕೊಡಗಿನ ಬೆಡಗಿ ನಿಧಿ ಸುಬ್ಬಯ್ಯನಿಗೆ ಕಂಕಣ ಭಾಗ್ಯ ಕೂಡಿಬಂದಿದೆ. ಚಮ್ಕಾಯ್ಸಿ ಚಿಂದಿ ಉಡಾಯ್ಸಿ, ಕೃಷ್ಣನ್ ಮ್ಯಾರೇಜ್ ಸ್ಟೋರಿ, ಪಂಚರಂಗಿ ಸೇರಿದಂತೆ 12ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ನಿಧಿ ಸುಬ್ಬಯ್ಯ ಓ ಮೈ ಗಾಡ್, ಅಜಬ್-ಗಜಬ್ ಲವ್ ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದು, ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದಾರೆ.
ಫೆ.10ರಂದು ಫಿಫ್ತ್ ಜನರೇಷನ್ ಎಂಬ ಸಿನಿಮಾ ತೆರೆ ಕಾಣಲಿದ್ದು, ಅಂದೇ ನಿಧಿ ಸುಬ್ಬಯ್ಯ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಫೆ.10 , 11ರಂದು ಮಡಿಕೇರಿಯ ರೆಸಾರ್ಟ್‍ವೊಂದರಲ್ಲಿ ಉದ್ಯಮಿ ಲವೇಶ್ ಸಿಂಧಿ ಅವರನ್ನು ವಿವಾಹವಾಗಲಿದ್ದಾರೆ.

ಒಂದು ವರ್ಷದ ಹಿಂದೆ ಲವೇಶ್ ಅವರನ್ನು ನೋಡಿದ ನಿಧಿಗೆ ಆರು ತಿಂಗಳ ಹಿಂದೆ ಸ್ನೇಹಿತರ ಕಡೆಯಿಂದ ಪ್ರಪೋಸಲ್ ಬಂದಿತ್ತು. ಇದಕ್ಕೆ ಎರಡೂ ಮನೆಯವರು ಒಪ್ಪಿದ್ದಾರೆ. ಸಿಂಧಿ ಸಂಪ್ರದಾಯದಂತೆ ವಿವಾಹ ನಡೆಯಲಿದ್ದು, ಎರಡು ದಿನ ಮದುವೆಯ ಆರತಕ್ಷತೆ ಕೊಡಗಿನಲ್ಲಿ ಸಾಂಪ್ರದಾಯಿಕವಾಗಿ ನಡೆಯಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin